
ಸಿಗಂದೂರು: ಬೈಕ್ ಸವಾರನೊಬ್ಬ ಆಗಸ್ಟ್ 15 ರಂದು ನೂತನವಾಗಿ ನಿರ್ಮಿಸಲಾದ ಸಿಗಂದೂರು ಸೇತುವೆ ಮೇಲೆ ವೀಲಿಂಗ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವೀಲಿಂಗ್ ಮಾಡಿದ ವೀಡಿಯೋ ಸೋಶಿಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಪೋಲಿಸರು ವೀಡಿಯೋ ಜಾಡು ಹಿಡಿದು ಬೈಕ್ ಸವಾರನಿಗೆ ಐದು ಸಾವಿರ ದಂಡ ಹಾಗೂ ಬೈಕ್ ಪೋಲಿಸರ ವಶಕ್ಕೆ ಪಡೆದಿದ್ದಾರೆ.
ರಸ್ತೆಗಳಲ್ಲಿ ವೀಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮೊದಲ ಬಾರಿ ಸಿಕ್ಕಿ ಬಿದ್ದವರಿಗೆ 5,000 ದಂಡ ವಿಧಿಸಲಾಗುವುದು ಹಾಗೂ ಎರಡನೇ ಭಾರಿ ಅದೇ ತಪ್ಪನ್ನು ಮತ್ತೆ ಮರು ಕಳಿಸಿದರೆ 25,000 ರೂ ದಂಡ ಹಾಕಿ ಅದರೊಂದಿದೆ ಬೈಕ್ ಮುಟ್ಟುಗೋಲು ಹಾಕಲಾಗುತ್ತದೆ ಎಂದು ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ಮಾಹಿತಿಯನ್ನು ನೀಡಿದ್ದಾರೆ.
ಬೈಕ್ ಸವಾರನು ತಾನು ಮಾಡಿದ ತಪ್ಪನ್ನು ಇನ್ನು ಮುಂದೆ ಯಾರೂ ಕೂಡ ಮಾಡಬಾರದು, ಹೆಲ್ಮೆಟ್ ಧರಿಸಿ ಹಾಗೂ ಅಜಾಗರೂ ಕತೆಯ ಚಾಲನೆ ಮಾಡಬೇಡಿ ಎಂದು ಮನವಿ ಮಾಡಿದ್ದಾನೆ.