
ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಬಣಕಲ್ ರಸ್ತೆ ಮಧ್ಯ ಶೋ ರೂಂ ಸಿಬ್ಬಂದಿಗಳೇ ಡೆಮೋ ಕಾರಿನಿಂದ ಡೀಸೆಲ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನಿಂದ ಕಡೂರಿನತ್ತ ಹೊಸ ಟಾಟಾ ಯೋಧ ಕಾರನ್ನು ಶೋ ರೂಂಗೆ ತಲುಪಿಸಲು ಹೊರಟಿದ್ದ ಸಿಬ್ಬಂದಿಗಳು ಮಾರ್ಗ ಮಧ್ಯೆ ಕಾರಿನ ಇಂಜಿನ್ ಪಕ್ಕದ ಪಂಪ್ ಪೈಪ್ ಬಿಚ್ಚಿ ಸುಮಾರು 10 ಲೀಟರ್ ಡೀಸೆಲ್ ಇಳಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ.
ಕಳ್ಳತನ ಮಾಡಿದ ಹಣದಿಂದ ಎಣ್ಣೆ ಹೊಡೆದು, ನಾನ್ ವೆಜ್ ಊಟ ಮಾಡಿ ವಾಪಾಸ್ ಹೋದ ಸಿಬ್ಬಂದಿಗಳ ಕಾರ್ಯ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಹೊಸ ವಾಹನಗಳನ್ನು ಶೋ ರೂಂಗಳಿಗೆ ತಲುಪಿಸುವಾಗಲೇ ಸಿಬ್ಬಂದಿಗಳು ಇಂತಹ ದುಷ್ಕೃತ್ಯದಲ್ಲಿ ತೊಡಗಿರುವುದು ಗಂಭೀರವಾಗಿದ್ದು, ಈ ಕುರಿತು ಸ್ಥಳೀಯರು ಕಂಪನಿ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.