
ಎನ್.ಆರ್.ಪುರ: ಎನ್.ಆರ್ಪುರದ ಹಾತೂರು ಅಂಗವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಿವಮೊಗ್ಗದ ಡಿವಿಎಸ್ ಕಾಲೇಜಿನ ನಿವೃತ್ತ ಪಾಚಾರ್ಯರಾದ ಶೇಷಗರಿಯವರು, ಮಾತನಾಡಿ ಮಕ್ಕಳಿಗೆ ಶುದ್ಧ ನೀರಿನ ವ್ಯವಸ್ಥೆಯು ಬಹುಮುಖ್ಯವಾಗಿದೆ. ಕಲುಷಿತ ನೀರಿನಿಂದ ರೋಗಗಳು ಬರುವುದರಿಂದ, ಮಕ್ಕಳು ಶುದ್ಧ ನೀರನ್ನು ಕುಡಿಯಬೇಕಿದೆ. ಅಂತೆಯೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವುದು ಮುಖ್ಯವಾಗಿದೆ ಏಕೆಂದರೆ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕಾಗಿದೆ ಎಂದರು. ಅವರು ಕುಡಿಯುವ ನೀರಿನ ಫಿಲ್ಟರ್ ಅನ್ನು ಅಂಗನವಾಡಿಗೆ ಕೊಡುಗೆಯಾಗಿ ನೀಡಿದ್ದಾರೆ.
ಸೀತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಖಂಡಕ ಉಮೇಶ್ರವರು ಶಿಕ್ಷಣ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಒತ್ತನ್ನು ನೀಡಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್ಬಿಐ ಶಿವಮೊಗ್ಗ ಶಾಲಾ ಅಸಿಸ್ಟೆಂಟ್ ಮ್ಯಾನೇಜರ್ ವಾಣಿಶ್ರೀ, ಮೇಘನಾ, ಸೀತೂರು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಪ್ಪ, ಮುಖ್ಯ ಶಿಕ್ಷಕಿ ಪದ್ಮಾ, ಹೊನ್ನೇಕೊಪ್ಪ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯಕರ್ತೆ ಪವಿತ್ರಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.