
ಸೊರಬ: ಅವಧಿಗೆ ಮುನ್ನವೇ ಮಳೆ ಆರಂಭವಾದ ಕಾರಣ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅತಿಯಾದ ಮಳೆಯ ಕಾರಣದಿಂದಾಗಿ ಬಿತ್ತನೆ ಮಾಡಲು ಸಾಧ್ಯವಾಗದೆ, ಬಿತ್ತಿರುವ ಬೆಳೆಗಳನ್ನು ಕಟಾವು ಮಾಡಲೂ ಆಗದೆ ರೈತರು ಕಂಗಾಲಾಗಿದ್ದರೆ. ಒಂದೆಡೆ ಬಿತ್ತಿದ ಬೆಳೆಗಳು ಕೊಳೆತು ಹೋಗಿವೆ, ಮತ್ತೊಂದೆಡೆ ಬಿತ್ತನೆ ಮಾಡಲು ಆಗದ ಕಾರಣ ಕೃಷಿ ಭೂಮಿಯು ಪಾಳುಬಿದ್ದಿದೆ. ಇದರಿಂದಾಗಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸರ್ಕಾರ ಕೂಡಲೇ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಒದಗಿಸಬೇಕಾಗಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದಾರೆ. ಜೋಳ, ಶುಂಠಿ ಕೊಳೆತು ಹೋಗಿದ್ದು, ಸರ್ಕಾರವು ಬಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಗೆ ಸೂಚಿಸಬೇಕೆಂದು ಮನವಿಯ ಮೂಲಕ ಒತ್ತಾಯಿಸಲಾಯಿತು.
ಹಸಿರು ಸೇನೆ ಹಾಗೂ ರೈತ ಸಂಘ ಗೌರವಾಧ್ಯಕ್ಷ ಮಂಜುನಾಥ ಗೌಡ, ತಾಲ್ಲೂಕು ಅಧ್ಯಕ್ಷ ಕೆ. ಈಶ್ವರಪ್ಪ ಕೊಡಕಣಿ, ನಾಗರಾಜ್, ಭಾಸ್ಕರ್, ಸೋಮಣ್ಣ, ಶಿವಪ್ಪ, ಶಿವಕುಮಾರ್, ಬಸವರಾಜಪ್ಪ ಗೌಡ, ಪಾಲಕ್ಷಪ್ಪ, ಹನುಮಂತಪ್ಪ, ಹುಚ್ಚಪ್ಪ ಇತರರು ಉಪಸ್ಥಿತರಿದ್ದರು.