
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು ಗ್ರಾಮದ ನಿವಾಸಿಯಾದ ಮಹಮ್ಮದ್ ರಫೀಕ್ ಅಲಿಯಾಸ್ ಮದ್ದಡ್ಕ ರಫೀಕ್ ಅಕ್ರಮ ಗಾಂಜಾ ದಾಸ್ತಾನು ಮತ್ತು ಮಾರಾಟ ಪ್ರಕರಣದಲ್ಲಿ ಬೆಳ್ತಂಗಡಿ ಪೋಲಿಸರಿಂದ ಹಲವು ಸಮಯಗಳಿಂದ ತಲೆಮರೆಸಿಕೊಂಡಿದ್ದು, ರಫೀಕ್ನನ್ನು ಆಗಸ್ಟ್ 14ರಂದು ಕಾರ್ಕಳದಲ್ಲಿ ಬಂಧಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೋಲಿಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ಪೋಲಿಸ್ ಠಾಣೆ, ವೇಣೂರು ಠಾಣೆ, ಚಿಕ್ಕಗಳೂರು ಸಿಇಎನ್ ಪೋಲಿಸ್ ಠಾಣೆ, ಬಣಕಲ್ ಪೋಲಿಸ್ ಠಾಣೆ, ಬಂಟ್ವಾಳ ಅಬಕಾರಿ ಠಾಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಪೋಲಿಸ್ ಠಾಣೆಗಳಲ್ಲಿ ಮದಡ್ಕ ರಫೀಕ್ ವಿರುದ್ಧ ಗಾಂಜಾ ಪ್ರಕರಣಗಳು ದಾಖಲಾಗಿದೆ.