
ಶಿವಮೊಗ್ಗ: ಶಿವಮೊಗ್ಗ ನಗರದ ರಾಜೇಂದ್ರ ನಗರ ಮುಖ್ಯ ರಸ್ತೆಯ ಸಮೀಪ ಆಗಸ್ಟ್ 12ರ ಮುಂಜಾನೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಬೈಕ್ನಲ್ಲಿ ಬಂದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿರುವ ಮಾಂಗಲ್ಯ ಸರವನ್ನು ಅಪಹರಿಸಿದ ಘಟನೆ ಸಂಭವಿಸಿದ್ದು. ಮಹಿಳೆಯನ್ನು ಬಿವಿ ವನಜಾಕ್ಷಿ ಎಂದು ಗುರುತಿಸಲಾಗಿದೆ. ವನಜಾಕ್ಷಿ ತಮ್ಮ ಸ್ನೇಹಿತೆಯೊಂದಿಗೆ ವಾಕಿಂಗ್ ಮಾಡುವ ಸಂದರ್ಭದಲ್ಲಿ ಮೆರೂನ್ ಬಣ್ಣದ ಜರ್ಕಿ ಹಾಗೂ ಹೆಲ್ಮೆಟ್ ಧರಿಸಿದ್ದ ಸರಕಳ್ಳ ಇವರ ಪಕ್ಕದಲ್ಲಿ ಹಾದು ಹೋಗಿ ಮತ್ತೆ ಬೈಕ್ ಹಿಂತಿರುಗಿಸಿಕೊಂಡು ಬಂದು ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಮಾಂಗಲ್ಯ ಸರವು 42ಗ್ರಾಂ ತೂಕವನ್ನು ಹೊಂದಿದ್ದು, ಸುಮಾರು 2.30ಲಕ್ಷ ರೂ ಮೊತ್ತದ ಸರವೆಂದು ಅಂದಾಜುಗಣನೆ ಮಾಡಲಾಗಿದೆ. ಜಯನಗರ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.