
ದೇಹಕ್ಕೆ ವಿಟಮಿನ್ ಬಿ12 ಅತ್ಯಂತ ಅವಶ್ಯಕವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಇದನ್ನು ಕೋಬಲಾಮಿನ್ ಎಂದು ಹೇಳಲಾಗುತ್ತದೆ. ನಮ್ಮ ದೇಹವು ವಿಟಮಿನ್ ಬಿ12ನ್ನು ಸ್ವತ: ಉತ್ಪಾದಿಸುವುದಿಲ್ಲ, ಆದ್ದರಿಂದ ನಾವು ಅದನ್ನು ಆಹಾರದ ಮೂಲಕ ಪಡೆಯಬೇಕು.
ವಿಟಮಿನ್ ಬಿ12 ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಕಣಗಳು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುತ್ತದೆ. ಇದರ ಕೊರತೆಯು ಮೆಗಾಲೋಬ್ಲಾಸ್ಟಿಕ್ ರಕ್ತ ಹೀನತೆಗೆ ಕಾರಣವಾಗಬಹುದು. ಇದು ಆಯಾಸ ಹಾಗೂ ದೌರ್ಬಲ್ಯಕ್ಕೆ ಕಾರಣವಾಗಬಹುದು. ಇದು ಮೆದುಳಿನ ಆರೋಗ್ಯ ಮತ್ತು ಅರಿವಿನ ಕಾರ್ಯ ಚಟುವಟಿಕೆಗಳಿಗೆ ಬಹಳ ಉಪಕಾರಿಯಾಗಿದೆ. ಇದರ ಕೊರತೆಯಾದರೆ ಕಿನ್ನತೆ, ಗೊಂದಲ, ಮರೆವು ಹಾಗೂ ಮನಸ್ಥಿತಿ ಬದಲಾವಣೆಗೆ ಕಾರಣವಾಗ ಬಹುದಾಗಿದೆ. ವಿಟಮಿನ್ ಬಿ12 ಡಿಎನ್ಎ ಮತ್ತು ಆರ್ಎನ್ಎ ಉತ್ಪಾದನೆ ಹಾಗೂ ನಿಯಂತ್ರಣದಲ್ಲಿ ಪ್ರಮುಖ ಕಾರ್ಯವಹಿಸುತ್ತದೆ. ಇದು ಎಲ್ಲಾ ಕೋಶಗಳ ಕಾರ್ಯನಿರ್ವಹಣೆಗೆ ಅಗತ್ಯವಾಗಿದೆ.