
ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಮಾಡುವ ವೇಳೆಯಲ್ಲಿ ಕಾರು ವಿದ್ಯುತ್ ಕಂಬಕ್ಕೆ ಹೊಡೆದು ಅಪಘಾತ ನಡೆದ ಘಟನೆ ಇಂದು ಬೆಳಕಿಗೆ ಬಂದಿದ್ದು. ಇನೋವಾ ಕಾರ್ ಒಂದರಲ್ಲಿ ಚಾರ್ಮಡಿ ಕಡೆಯಿಂದ ಬಂದ ಕಾರು ಗುರುವಾಯನಕೆರೆ ಮುಖ್ಯ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಸುಮಾರು ಎರಡು ಗಂಟೆಗಳಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರಿಗಳು ಪರದಾಡುವಂತಾಯಿತು. ಅಪಘಾತದಲ್ಲಿ ಹಸುವು ರಸ್ತೆ ಮೇಲೆಯೇ ಬಿದ್ದಿದ್ದು, ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ. ಆರೋಪಿಯು ಕಾರಿಗೆ ಎರಡು ನಂಬರ್ ಪ್ಲೇಟ್ನ್ನು ಬಳಸಿದ್ದ ಎನ್ನಲಾಗಿದೆ.