
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಹು ಪ್ರಸಿದ್ಧ ದೇವಸ್ಥಾನವಾದ ಶ್ರೀರಾಮೇಶ್ವರ ದೇವಾಲಯದ ಅನ್ನದಾಸೋಹ ಕೊಠಡಿಯಲ್ಲಿ ಕಳ್ಳತನ ನಡೆದಿರು ಘಟನೆ ಬೆಳಕಿಗೆ ಬಂದಿದ್ದು. ರಾಮೇಶ್ವರ ದೇವಸ್ಥಾನದಲ್ಲಿ ಇರುವ ಪಕ್ಕದ ಗುಡಿಯ ಬಾಗಿಲು ಮುರಿದು ಕದಿಯುವ ಯತ್ನ ಮಾಡಿದ್ದಾರೆ. ಅಲ್ಲಿ ಯಾವುದೇ ರೀತಿಯ ವಸ್ತು ಅಥವಾ ಹಣ ಸಿಗದ ಕಾರಣ ಕಳ್ಳನು ರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಭೋಜನಾಯದಲ್ಲಿದ್ದ ಸಿಸಿ ಕ್ಯಾಮರಾವನ್ನು ತಿರುಗಿಸಿ, ಹಲವು ಬಾಗಿಲುಗಳನ್ನು ಮುರಿದು, ಕೊಠಡಿಯಲ್ಲಿದ್ದ ಬೀರಿನ ಬಾಗಿಲನ್ನು ಹಾಗೂ ಸಣ್ಣ ಕಾಣಿಕೆ ಹುಂಡಿಯಲ್ಲಿದ್ದ ಹಣ ದೋಚಿದ್ದಾನೆ. ಪೂರ್ವ ನಿಶ್ಚಿತ ರೀತಿಯಲ್ಲಿ ಕಳ್ಳತನ ನಡೆದಿದೆ. ಅನುಮಾನಸ್ಪದವಾಗಿ ಅಲ್ಲಿ ವ್ಯಕ್ತಿಯೊಬ್ಬ ಮಾಸ್ಕ ಧರಿಸಿ ಬಂದಿರುವುದು ತಿಳಿದು ಬಂದಿದ್ದು, ಯಾರು ಎಂಬುದು ತಿಳಿದು ಬರಬೇಕಿದೆ. ಈ ಘಟನೆಯು ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.