
ಸಾಗರ: ಮೈಸೂರಿನಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ಯೋಧನೊಬ್ಬ ಮೃತ ಪಟ್ಟಿರುವ ಘಟನೆ ನಡೆದಿದ್ದು. ಯೋಧನನ್ನು ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೆಮನೆ ಗ್ರಾಮದ ಅಗ್ನಿವೀರ ಯೋಧ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಅಂತ್ಯ ಸಂಸ್ಕಾರವನ್ನು ಶನಿವಾರದಂದು ಸ್ವಗ್ರಾಮ ಜಿಗಳೆಮನೆಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ, ವಿಧಿ-ವಿಧಾನವನ್ನು ನೆರವೇರಿಸಲಾಯಿತು. ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮದ ಹಲವಾರು ಜನರು ಅಂತ್ಯ ಸಂಸ್ಕಾರದ ಮೆರವಣಿಗೆಯಲ್ಲಿ ಭಾಗವಹಿಸಿದರು. . ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶನಿವಾರ ಯೋಧನ ಅಂತಿಮ ದರ್ಶನದಲ್ಲಿ ಪಾಲ್ಗೊಂಡು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರಜ್ವಲ್ ಎರಡು ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂದು ಬಹಳ ಉತ್ಸಾಹದಲ್ಲಿ ಅಗ್ನಿವೀರ್ಗೆ ಸೇರ್ಪಡೆಯಾಗಿದ್ದರು. ಅತ್ಯಂತ ಕಡುಬಡತನದಲ್ಲಿದ್ದ ಕುಟುಂಬಕ್ಕೆ ಪ್ರಜ್ವಲ್ ಆಸರೆಯಾಗಿದ್ದು, ಇದೀಗ ತುಂಬಲಾರದ ನಷ್ಟವಾಗಿದೆ