
ಲಂಡನ್:ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದಿದ್ದ, ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ತಲಾ ಮೂರು ವಿಕೆಟ್ ಪಡೆದ ಪರಿಣಾಮ, ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ತೀವ್ರ ಪ್ರತಿಕ್ರಿಯೆ ನೀಡಿತು. ಭಾರತ ಮೊದಲ ಇನಿಂಗ್ಸ್ನಲ್ಲಿ 204 ರನ್ಗಳಿಂದ ಮುಂದುವರಿಸಿ, ಕೇವಲ 20 ರನ್ ಸೇರಿಸಿ 224 ರನ್ಗಳಿಗೆ ಆಲೌಟ್ ಆಯಿತು. ಸುಮಾರು 9 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ್ದ ಕರುಣ್ ನಾಯರ್ ಈ ಬಾರಿ ಕೇವಲ 57 ರನ್ಗಳಿಗೆ ಸಿಮಿತವಾಗಿ ಔಟದರು. ಈ ಸರಣಿಯ ನಾಲ್ಕನೇ ಟೆಸ್ಟ್ ಕೈಬಿಟ್ಟಿದ್ದರೂ, ಐದನೇ ಪಂದ್ಯದಲ್ಲಿ ಅವಕಾಶ ಪಡೆದ ಅವರು ಕೊಂಚ ನೆಮ್ಮದಿ ತಂದರು. ಇಂಗ್ಲೆಂಡ್ ಪರವಾಗಿ ಅಟ್ಕಿನ್ಸನ್ 33 ರನ್ ನೀಡಿ 5 ವಿಕೆಟ್ ಪಡೆದರೆ, ಜೋಶ್ ಟಂಗ್ 3 ವಿಕೆಟ್ ಪಡೆದು ಭಾರತದ ಇನಿಂಗ್ಸ್ಗೆ ಹೊಡೆತ ನೀಡಿದರು. ಪ್ರತ್ಯುತ್ತರದಲ್ಲಿ ಇಂಗ್ಲೆಂಡ್ 42.5 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿತು. ಆರಂಭದಲ್ಲಿ ಕ್ರಾವ್ಲಿ ಮತ್ತು ಡಕೆಟ್ ಉತ್ತಮ ಆರಂಭ ಒದಗಿಸಿದರೂ, ಭಾರತ ಬೌಲರ್ಗಳು ಬಳಿಕ ಲಯ ಹಿಡಿದು ಬೌಲಿಂಗ್ ಆರ್ಭಟ ಮೆರೆದರು. ಚಹಾ ವಿರಾಮದೊಳಗೆ 6 ವಿಕೆಟ್ಗಳನ್ನು ಕಳೆದುಕೊಂಡ ಇಂಗ್ಲೆಂಡ್ ತಂಡದ ಆಟ ಕುಸಿತಕ್ಕೆ ಒಳಪಟ್ಟಿತು. ಒಟ್ಟಾರೆ, ದಿನದಾಟದಲ್ಲಿ 13 ವಿಕೆಟ್ಗಳು ಪತನಗೊಂಡಿದ್ದು, ಎರಡೂ ತಂಡದ ಬೌಲರ್ಗಳು ಪಂದ್ಯವನ್ನು ತೀವ್ರಗೊಳಿಸಿದರು.