
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಸವಾನಿ ಗ್ರಾಮದಲ್ಲಿರುವ ಬಿಎಸ್ಎನ್ಎಲ್ ಟವರ್ನಲ್ಲಿದ್ದ ಸುಮಾರು 2.8 ಲಕ್ಷ ರೂ. ಮೌಲ್ಯದ 2 ವೋಲ್ಟ್ ಸಾಮರ್ಥ್ಯದ 24 ಬ್ಯಾಟರಿಗಳನ್ನು ಕಳ್ಳರು ಅಪಹರಿಸಿ ಪರಾರಿಯಾದ ಘಟನೆ ಜುಲೈ 25 ರಂದು ಬೆಳಕಿಗೆ ಬಂದಿದೆ. ಟವರ್ ಪರಿಶೀಲನೆಗಾಗಿ ಸ್ಥಳಕ್ಕೆ ತೆರಳಿದ್ದ ಸಂದೀಪ ಮಳ್ಳಿಗಾರ ಅವರಿಗೆ ಬ್ಯಾಟರಿಗಳು ಕಾಣೆಯಾಗಿರುವುದು ತಿಳಿದುಬಂದ ನಂತರ ಅವರು ತೀರ್ಥಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.