
ಮುಂಬೈ: ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿರುವ ಘಟನೆ ಬಹಳ ಆಘಾತಕಾರಿ. ಖಾಸಗಿ ಟ್ಯೂಷನ್ ಶಿಕ್ಷಕಿಯೊಬ್ಬರು ಕೇವಲ ಎಂಟು ವರ್ಷದ ಮೂರನೇ ತರಗತಿಯ ವಿದ್ಯಾರ್ಥಿಯ ಹಸ್ತಲೇಖ ಚೆನ್ನಾಗಿಲ್ಲವೆಂಬ ಕಾರಣಕ್ಕೆ ಬಾಲಕನ ಕೈ ಮೇಣದಬತ್ತಿಯಿಂದ ಸುಟ್ಟು ಕ್ರೂರ ವರ್ತನೆ ತೋರಿದ್ದಾರೆ. ಬಾಲಕನ ಬಲಗೈ ಸಂಪೂರ್ಣವಾಗಿ ಸುಟ್ಟು ಗುಳ್ಳೆಗಳು ಬಂದಿದ್ದು, ಇದನ್ನು ಗಮನಿಸಿದ ಅವನ ಸಹೋದರಿ ಹಾಗೂ ತಂದೆ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಕುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯಾಗಿರುವ ಶಿಕ್ಷಕಿ ರಾಜಶ್ರೀ ರಾಥೋಡ್ ವಿರುದ್ಧ ಅಪ್ರಾಪ್ತರ ಮೇಲೆ ದೈಹಿಕ ಮತ್ತು ಮಾನಸಿಕ ಹಿಂಸೆ ಎಸಗಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ದೃಢಪಡಿಸಿದ್ದು, ಈ ಘಟನೆ ಮುಂಬೈನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೋಷಕರು ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರರು ಖಾಸಗಿ ಶಿಕ್ಷಕರ ಮೇಲಿನ ನಿಯಂತ್ರಣವನ್ನು ಹೆಚ್ಚು ಬಲಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.