
ಹಾವೇರಿ: ಮಹಿಳೆಯೊಬ್ಬರು ಆತ್ಮಹತ್ಯೆಮಾಡಿಕೊಳ್ಳುವುದಾಗಿ ನಿರ್ಧರಿಸಿ, ತುಂಗಾಭದ್ರಾ ದುಮುಕಿದ್ದಾರೆ. ನಂತರ ಜೀವದ ಮೇಲಿನ ಆಸೆಗಾಗಿ ಬಹಳಷ್ಟು ಕಿ.ಮೀಗಳನ್ನು ಈಜಿಕೊಂಡು ಬಂದು ಕೋಟಿಹಾಳ – ನಿಟಪಳ್ಳಿ ಬಳಿ ನದಿ ಮದ್ಯದ ಒಂದು ಗಿಡವನ್ನು ಹಿಡಿದುಕೊಂಡು ರಾತ್ರಿ ಬೆಳಗು ಮಾಡಿರುವ ಘಟನೆ ಸಂಭವಿಸಿದೆ. ಮಹಿಳೆಯನ್ನು ರಟ್ಟಿ ಹಳ್ಳಿಯ ರೂಪಾ ಎಂದು ಗುರುತಿಸಲಾಗಿದೆ. ಆಕೆಗೆ ಈಜು ಬಂದ ಕಾರಣ ಜೀವ ಉಳಿಸಿಕೊಳ್ಳಲಾಯಿತು. ಬೆಳಗಾದನಂತರ ರೂಪಾ ಜೀವ ಉಳಿಸುವಂತೆ ಕೂಗಿಕೊಂಡಿದ್ದಾಳೆ, ಮಹಿಳೆಯ ಧ್ವನಿ ಆಲಿಸಿದ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ಕೊಟ್ಟಿರುತ್ತಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೋಟ್ ಮೂಲಕ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಮಹಿಳೆಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ವಿಚಾರಣೆಯನ್ನು ನಡೆಸಿದ್ದಾರೆ. ಮಹಿಳೆಯ ಆತ್ಮಹತ್ಯೆಗೆ ಕಾರಣಗಳನ್ನು ಪೋಲಿಸರು ವಿಚಾರಣೆಯ ಮುಖಾಂತರ ತಿಳಿಯಬೇಕಿದೆ.