
ಮುಂಬೈ: ವ್ಯಕ್ತಿ ಎಷ್ಟು ಶ್ರೀಮಂತ ಎಂಬುದನ್ನು ನೋಡಲು ನಾವು ಸಾಮಾನ್ಯವಾಗಿ ಅವನು ಧರಿಸುವ ಬಟ್ಟೆ, ಬಳಸುವ ಐಷಾರಾಮಿ ವಸ್ತುಗಳನ್ನೇ ಆಧಾರ ಮಾಡುತ್ತೇವೆ. ಆದರೆ ಮುಂಬೈನ ಭರತ್ ಜೈನ್ ಎಂಬ ವ್ಯಕ್ತಿ ಈ ಕಲ್ಪನೆಯನ್ನೇ ತಲೆಕೆಳಗೆ ಮಾಡಿದ್ದಾರೆ. ಯಾವ ಉದ್ಯೋಗವಿಲ್ಲದೆ, ಮಾಸಿಕವಾಗಿ ಸುಮಾರು ₹60,000 ರಿಂದ ₹75,000ರಷ್ಟು ಭಿಕ್ಷೆ ಬೇಡಿ ಗಳಿಸುತ್ತಿರುವ ಈ ವ್ಯಕ್ತಿಯು ವಿಶ್ವದ ಶ್ರೀಮಂತ ಭಿಕ್ಷುಕ ಎನಿಸಿಕೊಂಡಿದ್ದಾರೆ. 40 ವರ್ಷಗಳ ಕಾಲ ಭಿಕ್ಷೆ ಬೇಡುವುದನ್ನೇ ಜೀವನೋಪಾಯವಾಗಿಸಿಕೊಂಡಿರುವ ಅವರು ಇಂದು 7.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ಮುಂಬೈನಲ್ಲಿ ಎರಡು ಬಡಾವಣೆಗಳಲ್ಲಿ ಫ್ಲಾಟ್, ಥಾಣೆಯಲ್ಲಿ ಅಂಗಡಿಗಳು ಇದ್ದು, ಪ್ರತಿಮಾಸವೂ ₹30,000 ಬಾಡಿಗೆ ಆದಾಯ ಬರುತ್ತದೆ. ಅವರ ಇಬ್ಬರು ಮಕ್ಕಳು ಟಾಪ್ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದು, ಈ ಎಲ್ಲಾ ಮಾಹಿತಿ ಓದಿದರೆ ಭಿಕ್ಷುಕನ ಆದಾಯ ನಿಜಕ್ಕೂ ಅಚ್ಚರಿಯಾಗುತ್ತದೆ.