
ಮೂರು ವರ್ಷಗಳಿಂದ ಪೊಲೀsಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಡ್ರಗ್ಸ್ ಸಪ್ಲೈಯರ್ ಪೂರ್ಣ ರಾಮ್ ಶರ್ಮಾ ಈಗ ಕೊನೆಗೂ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ರಾಜಸ್ಥಾನದ ಹನುಮಾನ್ಗಢದಲ್ಲಿ ಪತ್ತೆಯಾದ ಪೂರ್ಣ ರಾಮ್, ತನ್ನ ಗುರುವೇಷದಿಂದ ಪೊಲೀಸರಿಗೆ ಮಿಂಚಿನಂತೆ ತಪ್ಪಿಸಿಕೊಂಡಿದ್ದ. ಮಾರ್ಚ್ 2023ರಲ್ಲಿ 115 ಗ್ರಾಂ ಹೆರಾಯಿನ್ ಜಪ್ತಿ ಆದ ವೇಳೆ, ಈ ಡ್ರಗ್ಸ್ ಜಾಲದ ಹಿಂದೆ ಪೂರ್ಣ ರಾಮ್ನ ಹೆಸರು ಬಹಿರಂಗವಾಗಿತ್ತು. ನಂತರ ಮಂತ್ರವಾದಿ ವೇಷದ ಆಶ್ರಯದಲ್ಲಿ ತಲೆಮರೆಸಿಕೊಂಡಿದ್ದ ಅವನನ್ನು ಪೊಲೀಸರು ಇದೀಗ ಪತ್ತೆಹಚ್ಚಿ ಬಂಧಿಸಿದ್ದಾರೆ.