
ಶೃಂಗೇರಿ: ಶೃಂಗೇರಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕುರುಬಕೇರಿ ಸರ್ಕಲ್ ಎಂದು ಕರೆಯುತ್ತಿದ್ದ ವೃತ್ತವನ್ನು ಇದೀಗ ಬೇಗಾನೆ ರಾಮಯ್ಯ ವೃತ್ತ ಎಂದು ನಾಮಕರಣ ಮಾಡಿ ನೂತನ ವೃತ್ತವನ್ನು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುರುಗಳಾದ ಶ್ರೀ ಗುಣನಾಥ ಸ್ವಾಮಿಗಳು ಉದ್ಘಾಟನೆ ನೆರವೇರಿಸಿದರು. ಮಲೆನಾಡಿನ ಕ್ಷೇತ್ರದ ಮಾಜಿ ಶಾಸಕರು, ಧೀಮಂತ ನಾಯಕ, ಮಾಜಿ ಸಚಿವ ದಿ.ಬೇಗಾನೆ ರಾಮಯ್ಯ ವೃತ್ತ ಲೋಕಾರ್ಪಣೆಗೊಂಡಿದೆ.
ಬೇಗಾನೆ ರಾಮಯ್ಯ ವೃತ್ತ ಲೋಕಾರ್ಪಣೆಗೊಳಿಸಿ ಮಾತನಾಡಿದ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುರುಗಳಾದ ಶ್ರೀ ಗುಣನಾಥ ಸ್ವಾಮಿಗಳು ರಾಮಯ್ಯ ಪುತ್ರಿಯಾದ ಆರತಿ ಕೃಷ್ಣಾರವರ ಪರಿಶ್ರಮ ತುಂಬಾ ಇದೆ, ಅಪ್ಪನಂತೆ ಮಗಳು ಕೂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಇವರಿಗಿದೆ ಎಂದರು.
ಡಾ|| ಆರತಿ ಕೃಷ್ಣರವರು ಭಾರತೀಯ ಸಮಿತಿ ಉಪಾಧ್ಯಕ್ಷರೂ, ಕಾಂಗ್ರೆಸ್ ನಾಯಕಿ ಆಗಿದ್ದು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಷೇತ್ರದಾದ್ಯಂತ ಬೋರ್ವೆಲ್ ರಾಮಯ್ಯ ಎಂದೇ ಹೆಸರುವಾಸಿಯಾಗಿದ್ದರು. ಅವರು ಮಾಡಿದ ಜನಪರ ಕಾರ್ಯಗಳು ಕ್ಷೇತ್ರದ ಜನರು ನೆನಪಿಸುವಂತಿದೆ. ತಂದೆಯವರ ಸ್ಮರಣಾರ್ಥ ಈ ವೃತ್ತವನ್ನು ನಿರ್ಮಸಲು ಸಹಕರಿಸಿದ ಸರ್ಕಾರದ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯವರಿಗೂ ಸರ್ವರಿಗೂ ಧನ್ಯವಾದವನ್ನು ತಿಳಿಸಿದರು. ಶೃಂಗೇರಿ ಪಟ್ಟಣ ಪಂಚಾಯಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾನತನಾಡಿದ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ರವರು ಕ್ಷೇತ್ರದಲ್ಲಿ ಬೋರ್ವೆಲ್ ಸೌಕರ್ಯ ನೀಡುವುದರ ಮೂಲಕ ತಾಯಂದಿರ ಸಂಕಷ್ಟಕ್ಕೆ ನೆರವಾಗಿ ಆಗಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಅವರ ಮಗಳಾದ ಡಾ|| ಆರತಿ ಕೃಷ್ಣರವರು ಉತ್ತಮ ಸೇವೆಗಳಲ್ಲಿ ನಿರತರಾಗಿದ್ದು ಸೇವೆಗಳು ಎಲ್ಲರಿಗೂ ತಲುಪುವಂತಾಗಲಿ ಎಂದಿದ್ದಾರೆ.
ಕಾಡಾ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಅಂಶಮಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸದಾಶಿವ, ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು, ಅಧಿಕಾರಿಗಳು, ಪೌರ ಕಾರ್ಮಿಕರು, ರಾಜಕೀಯ ಪಕ್ಷಗಳ ಮುಖಂಡರುಗಳು ನೂರಾರು ಮಂದಿ ಬೇಗಾನೆ ರಾಮಯ್ಯ ಅಭಿಮಾನಿಗಳು ಉಪಸ್ಥಿತರಿದ್ದರು.