
ಸಂತೆ ಬೆನ್ನೂರು ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಕೆಳದಿರಾಣಿ ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರು ಬಸವ ಸ್ವಾಮೀಜಿ ಗನ್ನಿ ನಿಂದ ಕೆಲಸ ಪೆನ್ನಿಂದ ಸಾಧ್ಯ.
ದಿನಪತ್ರಿಕೆಗಳಲ್ಲಿ ಬರುವಂತಹ ಸುದ್ದಿಗಳ ವಿಚಾರಗಳು ದಾಖಲೆಯಾಗಿದ್ದು ಯಾವುದೇ ಘಟನೆಗಳಿಗೆ ಸಂಬಂದ ಪಟ್ಟಂತೆ ಸಾಕ್ಷೀಕರಿಸಲು ಪತ್ರಿಕೆಗಳ ಸುದ್ಧಿ ಬಹುಮುಖ್ಯ ಪಾತ್ರವಹಿಸಲು ಸಹಕಾರಿಯಾಗಿವೆ ಇದರಿಂದ ಮುದ್ರಣ ಮಾಧ್ಯಮಗಳು ಬಲವಾಗಿ ನೆಲೆಯಾಗಿರಲು ಸಾಧ್ಯವಾಗಿದೆ ಎಂದು ತಿಳಸಿದರು.
ಉದ್ಗಾಟನೆಯನ್ನು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ನೆರವೇರಿಸಿ ಮಾತನಾಡಿ ತಾಲ್ಲೂಕಿನಲ್ಲಿರುವ ಪತ್ರಕರ್ತರು ಸತ್ಯ ನಿಷ್ಠವಾದ ವರದಿಗಳನ್ನು ಮಾಡುತ್ತಾ ಮಾಧ್ಯಮಗಳಿಗೆ ಶಕ್ತಿ ತುಂಬಬೇಕು ನಾನು ಮತ್ತು ಮಾಯಕೊಂಡ ಶಾಸಕ ಬಸವಂತಪ್ಪ ಜೊತೆಗೂಡಿ ತಾಲ್ಲೂಕಿನ ಕ್ರಿಯಾಶೀಲ ಪತ್ರಕರ್ತರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಮನೆಗಳನ್ನು ನಿರ್ಮಿಸಿ ಕೊಡುತ್ತೇನೆ ಎಂದರು.
ನಂತರ, ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್ ಬಸವಂತಪ್ಪ ಮಾತನಾಡಿ ಮೊಬೈಲ್ಗಳು ಚಲಾವಣೆಗೆ ಬರುವ ಮೊದಲು ಪತ್ರಕೆಗಳು ಜನಪ್ರೀಯತೆಯನ್ನು ಪಡೆದಿದ್ದವು ಅಂಗೈನಲ್ಲಿ ಪ್ರಪಂಚವನ್ನು ನೋಡುವ ಮೊಬೈಲ್ಗಳು ಬಂದಮೇಲೆ ಮುದ್ರಣ ಮಾಧ್ಯಮದ ವರ್ಚಸ್ಸು ಕುಂದದೆ ತನ್ನದೆ ಆದನಂತಹ ಪ್ರಭಾವದಲ್ಲಿ ಮುನ್ನಡೆಯುತ್ತಿದ್ದು ದಿನಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ವಿದ್ಯಾರ್ಥಿಗಳಿದ್ದಾಗಲೇ ಬೆಳಸಿಕೊಳ್ಳಬೇಕು ಎಂದರು.
ಪತ್ರಿಕಾ ದಿನಾಚರಣೆಯ ಮಹತ್ವವನ್ನು ಕುರಿತಂತೆ ಪತ್ರಕೋಧ್ಯಮ ಪದವೀದರ ಸಂಪನ್ಮೂಲ ವ್ಯಕ್ತಿ ಕಾಕನೂರು ಎಂ.ಬಿ ನಾಗರಾಜ್ ಮಾತನಾಡಿ ಕಾಸಿಗಾಗಿ ಸುದ್ಧಿಮಾಡದೆ ಮೌಲ್ಯಗಳಿಗಾಗಿ ಸೇವೆ ಮಾಡುವವನೆ ನಿಜವಾದ ಪತ್ರಕರ್ತ ವಿರೇಶ್ ಪ್ರಸಾದ ಅವರಿಗೆ ನೀಡಿ ಗೌರವಿಸಲಾಯಿತು. ಪತ್ರಿಕಾ ವಿತರಕರಾದ ಎನ್.ನಿತಿನ್, ಕಿರಣ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಾದ ಕೆ.ಎಸ್ ವಿನಯ ಪ್ರಸಾದ್ ಸಂಜನಾ ಎಸ್ ಪವಾರ್, ನಿಶಾ, ಗೌಸಿಯಾ ತಜನಮ್ ಈ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ದೈವ ಸಂಸ್ಕೃತಿ ಪ್ರತಿಷ್ಟಾನದ ಬೂದಿಸ್ವಾಮಿ, ಸತೀಶ್ ಪವಾರ್, ಬಾ.ರಾ ಮಹೇಶ್ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಫಕೃದ್ದೀನ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲಿಂಗರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅದ್ಯಕ್ಷತೆ ರೇಣುಕಾಮೂರ್ತ್ಯಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ. ಶಾಲೆಯ ಪ್ರಾಚಾರ್ಯರಾದ ಶಾರದ ಎಸ್.ಡಿ.ಎಂ.ಸಿ ಅಧ್ಯಕ್ಷ ಸ್ವಾಮಿಗೌಡ್ರು, ಪತ್ರಕರ್ತರಾದ ಎಂ.ಅಣ್ಣೋಜಿರಾವ್, ಎಂ. ಪ್ರಸನ್ನ, ಎಸ್.ಜಿ ಕಿರಣ್, ಸತೀಶ್, ದೇವರಾಜ್ ಮಹಾರುದ್ರ ಹಾಗೂ ಶಾಲಾ ಶಿಕ್ಷಕರ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.