
ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ತಾಲ್ಲೂಕಿನಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಬಲಿಯಾದ ಪ್ರಕರಣಕ್ಕೆ ಸಂಬಂದಿಸಿದಂತೆ ಬಾಳೆಹೊನ್ನೂರಲ್ಲಿ ರೈತರ ಉಗ್ರ ಹೋರಾಟದ ಹಿನ್ನಲೆಯಲ್ಲಿ ರೈತರು ಬೀದಿಗಿಳಿಯುತ್ತಿದ್ದಂತೆ ಆನೆ ಸೆರೆಗೆ ಮುಂದಾದ ಸರ್ಕಾರ. ರೈತರ ಪ್ರತಿಭಟನೆ ಮುಗಿಯುವ ಮೊದಲೇ ಕುಮ್ಕಿ ಆನೆಗಳ ಆಗಮನ. ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಬಿಡಾರದಿಂದ ನಾಲ್ಕು ಆನೆಗಳು ಆಗನವಾಗಲಿದ್ದು, ತಕ್ಷಣ ಆನೆ ಸೆರೆಗೆ ಮುಂದಾಗ್ತೀವಿ ಎಂದು ಡಿಸಿ-ಡಿ.ಎಫ್.ಓ ತಿಳಿಸಿದ್ದಾರೆ. ಇಂದು ಮದ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭಗೊಳ್ಳಲಿದೆ. ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿದ್ದು ಇದೇ ಮೊದಲು ಎನ್ನಿಸುತ್ತದೆ. ಕೊಡಗು, ಮೈಸೂರು, ಶಿವಮೊಗ್ಗದಿಂದ ವೈದ್ಯರ ತಂಡ ಆಗಮನವಾಗಲಿದೆ. ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ, ಇಟಿಎಫ್ ಸಿಬ್ಬಂದಿ ಸನ್ನದ್ದವಾಗಿದೆ.