
ಮೂಡಿಗೆರೆ: ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದರ ವಿರುದ್ಧ ಸ್ಥಳಿಯರು ಕಿಡಿಕಾರಿದ್ದು,ಒಂದೇ ದಿನ, ಒಂದೇ ಮನೆಯಲ್ಲಿ ಇಬ್ಬರು ಸತ್ತಿದ್ದಾರೆ, ಸೌಜನ್ಯಕ್ಕೂ ಯಾರೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸ್ಥಳಕ್ಕೆ ಯಾವ ಜನಪ್ರತಿನಿಧಿಗಳೂ ಬಂದಿಲ್ಲ ಎಂದು ಆಕ್ರೋಶ. ನಿನ್ನೆಯಿಂದ ಸಂಜೆಯಿಂದಲೂ ಮೃತದೇಹ ಹುಡುಕ್ತಿರೋ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸುರಿಯುತ್ತಿರೋ ಮಳೆ ಮಧ್ಯೆಯೇ ಭದ್ರೆಯ ಒಡಲಲ್ಲಿ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ. ದುಡ್ಡಿದ್ದವರು ಸತ್ರೆ ಬರ್ತಿದ್ರು, ಇವರು ಬಡವರಲ್ವಾ ಏಕೆ ಬರ್ತಾರೆ ಎಂದು ಆಕ್ರೋಶ
ಶ್ರೀಮಂತರ ಮಕ್ಕಳಾಗಿದ್ರೆ ಫ್ಲೈಟ್ ನಲ್ಲಿ ಬಂದು ಶವ ಹುಡಕ್ತಿದ್ರುಈಗ ಯಾರೂ ಇಲ್ಲ ಎಂದು ಕಿಡಿಕಾರಿದ್ದಾರೆ. ಭಾರೀ ರಭಸದಿಂದ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಶವ ಹುಡುಕೋದು ಸವಾಲಾಗಿದೆ.