
ಮುಂಬೈ: ಬುಧವಾರದಂದು ಮಸ್ಕತ್ ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಥಾಯ್ಲೆಂಡ್ ಮಹಿಳೆ ಮಗುವಿಗೆ ಜನ್ಮ ನೀಡಿದ ಆಶ್ಚರ್ಯ ಘಟನೆ ನಡೆದಿದೆ. ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಗೆ ತೀವ್ರ ಹೇರಿಗೆ ನೋವು ಕಾಣಿಸಿಕೊಂಡಿದ್ದು, ಗಗನಸಖಿಯರ ಸಮಯ ಪ್ರಜ್ಞೆಯಿಂದ ಹೆರಿಗೆಗಾಗಿ ಸುರಕ್ಷಿತ ಸ್ಥಳವನ್ನ ನಿರ್ಮಿಸಿ, ಸುಸೂತ್ರವಾಗಿ ವಿಮಾನದಲ್ಲೇ ಹೆರಿಗೆ ಮಾಡಿಸಿದ್ದಾರೆ. ಸಿಬ್ಬಂದಿಗಳು ಸನ್ನದ್ದವಾಗಿರುವುದು ಮಾತ್ರವಲ್ಲದೆ ಸಹಾನುಭೂತಿ ಹಾಗೂ ಟೀಮ್ ವರ್ಕನ್ನು ಇದು ತೋರಿಸುತ್ತದೆ ಎಂದು ಏರ್ ಲೈನ್ ಸಂಸ್ಥೆ ಹೇಳಿಕೊಂಡಿದೆ.