
ಚನ್ನಗಿರಿ: ಕಳಪೆ ರಸ್ತೆ ನಿರ್ಮಾಣ ದೊಡ್ಡೇರಿ ಕಟ್ಟೆ ಗ್ರಾಮಸ್ಥರಿಂದ ಜನಪ್ರತಿನಿಧಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ಆಕ್ರೋಶ.
ರಸ್ತೆ ನಿರ್ಮಾಣಕ್ಕೆ ಒಳ್ಳೆಯ ಗುಣಮಟ್ಟದ ಮಣ್ಣು ಬಳಸದೆ ಕೆಸರು ಗದ್ದೆ ಅಂತಹ ಮಣ್ಣನ್ನು ಹಾಕಿದ್ದರಿಂದ ಜನರಿಗೆ ಹಾಗೂ ಆನ ಸಹಾರರಿಗೆ ರಸ್ತೆಯಲ್ಲಿ ಬಿದ್ದು ಎದ್ದು ಕೈಯು ಕಾಲು ಮುರಿದುಕೊಂಡು ಹಾಗೂ ಹೋಗುವ ಸ್ಥಿತಿಯಾಗಿದೆ ಎಂದು ಗುತ್ತಿಗೆದಾರನ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ದೊಡ್ಡೇರಿ ಕಟ್ಟೆ ಹಾಗೂ ಕೊಳೆನೂರು ಗ್ರಾಮ ಸಂಪರ್ಕಿಸುವ 2 ಕಿ.ಮೀ ಉದ್ದದ ಸುಮಾರು ಮೂರು ತಿಂಗಳ ಹಿಂದೆ ನೂತನವಾಗಿ ನಿರ್ಮಿಸಿರುವ ಮೆಟ್ಲಿಂಗ್ ರಸ್ತೆಯ ಪರಿಸ್ಥಿತಿ ಇದಾಗಿದೆ ಈ ರಸ್ತೆಯ ನಿರ್ಮಾಣಕ್ಕೆ ಸುಮಾರು 85 ಲಕ್ಷ ರೂಗಳ ವೆಚ್ಚ ಮಾಡಲಾಗಿದೆ. ದಿನನಿತ್ಯ ಈ ರಸ್ತೆಯಲ್ಲಿ ಶಾಲಾ ವಾಹನಗಳು. ರೈತರು ಹಾಗೂ ಎರಡು ಗ್ರಾಮದ ಜನರು ಸಂಚರಿಸುತ್ತಾರೆ. ಈಗ ಮಳೆಗಾಲ ವಾಗಿದ್ದು ಮಣ್ಣಿನ ರಸ್ತೆಯನ್ನು ಅವಲಂಬಿಸಿ ಸಂಚರಿಸುತ್ತಿದ್ದಾರೆ.
ರಸ್ತೆಗೆ ಕಳಪೆ ಮಣ್ಣು ರಸ್ತೆಗೆ ಕಲ್ಲಿನ ಜರುಗು ಇರುವ ಗ್ರಾವೆಲ್ ಮಣ್ಣು ಹಾಕಬೇಕಿದ್ದ ರಸ್ತೆಗೆ ಕೇವಲ ಪೌಡರ್ ಮಣ್ಣನ್ನು ಹಾಕಿದ್ದಾರೆ ಇದರಿಂದ ವಾಹನ ಸವಾರರಿಗೆ ಮಳೆಗಾಲವಾಗಿದ್ದರಿಂದ ಮಣ್ಣು ಜಾರುತ್ತಿದೆ ಸುಮಾರು ಎರಡು ತಿಂಗಳಿಂದ 15 ಹೆಚ್ಚು ಚಿಕ್ಕಪುಟ್ಟ ಅನಾಹುತಗಳು ಸಂಭವಿಸಿವೆ ಇದರಲ್ಲಿ ಶಾಲಾ ವಾಹನ ಅಪಘಾತದಿಂದ ಪಾರಾಗಿದ್ದು ಒಂದು ವಾರದ ಕೆಳಗೆ ಸಂಭವಿಸಿದೆ. ರಸ್ತೆ ನಿರ್ಮಾಣದ ನಾಮಫಲಕ ಹಾಕಿಲ್ಲ ಎಂದು ದೊಡ್ಡೇರಿ ಕಟ್ಟೆ ರೈತ ಹರೀಶ್ ದೂರುತ್ತಾರೆ
ರಸ್ತೆಯ ಅನಾಹುತಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ ಗುತ್ತಿಗೆದಾರರಿಗೆ ಹಲವು ಬಾರಿ ಹೇಳಿದರು ಪ್ರಯೋಜನವಾಗಿಲ್ಲ ಹಾಗೂ ಇಂಜಿನಿಯರ್ ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ ಕೂಡಲೇ ರಸ್ತೆಯನ್ನು ದುರಸ್ತಿ ಪಡಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರಾದ ಮಹೇಶ್ವರಪ್ಪ.ನಾಗರಾಜ್. ಮೋಹನ್. ರಾಜಶೇಖರ್. ಮಹಾಂತೇಶ್. ಕುಬೇರಪ್ಪ. ಚಿದಾನಂದ.ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ಕುಳೇನೂರು ಅರುಣ್ ಕುಮಾರ್ ಎ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ