
ಆಷಾಢ ಅಮಾವಾಸ್ಯೆಯು ಹಿಂದೂ ಧರ್ಮದಲ್ಲಿ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾಗಿದೆ. ಇಂದು ಎಲ್ಲೆಡೆ ಭೀಮನ ಅಮವಾಸ್ಯೆ ಆಚರಿಸಲಾಗುತ್ತಿದೆ. ಭೀಮನ ಅಮವಾಸ್ಯೆಯನ್ನು ತುಳು ನಾಡಿನಲ್ಲಿ ಆಟಿ ಅಮವಾಸ್ಯೆಯೆಂದು ಕರೆಯುತ್ತಾರೆ. ಇಂದು ತುಳು ನಾಡಿನಲ್ಲಿ ಪಾಲೆದ ಕಷಾಯ ಕುಡಿಯುತ್ತಾರೆ. ಈ ಕಷಾಯವನ್ನು ಹಾಲೆ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ.
ಆಷಾಡ ಮಾಸದಲ್ಲಿ ಮಳೆ ಹೆಚ್ಚಾಗಿರುವುದರಿಂದ ರೋಗಗಳು ಹೆಚ್ಚಾಗಿ ಕಂಡು ಬರುವುದರಿಂದ ಕಷಾಯದ ಸೇವನೆಯಿಂದಾಗಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಎನ್ನಲಾಗಿದೆ. ಈ ದಿನವನ್ನು ಪಿತೃಗಳ ಆರಾಧನೆ ಮತ್ತು ಶ್ರಾದ್ಧ ಕಾರ್ಯಗಳನ್ನು ಮಾಡಲು ಮಹತ್ವವೆಂದು ತಿಳಿದು ಬಂದಿದೆ. ಆಷಾಢ ಅಮವಾಸ್ಯೆಯು ಚಾತುರ್ಮಾಸ್ಯದ ಆರಂಭವನ್ನು ಸೂಚಿಸುತ್ತದೆ. ಕೆಲವೆಡೆ ಈ ದಿನ ಅಳಿಯಂದಿರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿ ಉಡುಗೊರೆಯನ್ನು ನೀಡುವ ಪದ್ದತಿಯೂ ಇದೆ ಹಾಗೂ ಗೃಹಿಣಿಯರು ಕಂಕಣವನ್ನು ಕಟ್ಟಿಕೊಂಡು ಜ್ಯೋತಿಭೀಮೆಶ್ವರನನ್ನು ಪೋಜಿಸಿ ವ್ರತವನ್ನು ಆಚರಿಸುತ್ತಾರೆ. ದೇವರ ಆರಾಧನೆ, ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಮೀಸಲಾದ ಸಮಯ ಎಂದು ಹೇಳಲಾಗುತ್ತದೆ.