
ಎನ್ಆರ್ಪುರ: ದಾವಣಗೆರೆ ಹೊನ್ನಾಳಿ ಮೂಲದ ಮಹಿಳೆಯೊಬ್ಬರು ಆನೆ ದಾಳಿಗೆ ಸಿಲುಕಿ ಸಾವನಪ್ಪಿರುವ ಘಟನೆ ಎನ್ಆರ್ಪುರ ತಾಲ್ಲೂಕಿನ ಬನ್ನೂರು ಬಳಿ ನಡೆದಿದೆ. ಅನಿತಾ(25) ಮೃತ ದುರ್ದೈವಿ. ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿದ್ದ ಅನಿತಾ, ಕಳೆದ ರಾತ್ರಿ ೯ ಗಂಟೆಗೆ ಮನೆಗೆ ಹೋಗುವಾಗ ಆನೆ ದಾಳಿ ನಡೆಸಿದೆ. ಶಿವಮೊಗ್ಗ ಹೋಗುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಬಾಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.