
ಜಮಖಂಡಿ: ಡಾ|| ಸ.ಜ ನಾಗಲೋಟಿಮಠ ಅವರು ಬಾಲ್ಯದಲ್ಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ರಾಜ್ಯದ 5 ವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡುವಂತಹ ಸೇವೆ ಮಾಡಿದ್ದಾರೆ ಎಂದು ಬನಹಟ್ಟಿಯ ಮಕ್ಕಳ ಸಂಗಮದ ಅಧ್ಯಕ್ಷ ಹಿರಿಯ ಸಾಹಿತಿ ಜಯವಂತ ಕಾಡದೇವರ ಹೇಳಿದ್ದರು.
ನಗರದ ಬಾಲಕರ ಪರಶುರಾಮ ಭಾವು ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಸಂಗಮ ಬನಹಟ್ಟಿ ಹಾಗೂ ರೋಟರಿ ಸಂಸ್ಥೆ ಜಮಖಂಡಿ ಇವರ ಸಹಯೋಗದಲ್ಲಿ ಖ್ಯಾತ ವೈದ್ಯ ವಿಜ್ಞಾನಿ ಡಾ|| ಸ.ಜ ನಾಗಲೋಟಿ ಮಠರ ೮೫ನೇ ಜನ್ಮದಿನೋತ್ಸವ ಹಾಗೂ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಡಾ|| ಸ.ಜ ನಾಗಲೋಟಿಮಠ ಅವರು ಬಿ.ಸಿ ರಾಯ ಪ್ರಶಸ್ತಿಯನ್ನು ಪಡೆದ ಶ್ರೇಷ್ಠ ವೈದ್ಯ ವಿಜ್ಞಾನಿಯಾಗಿದ್ದರು, ಚಿಕ್ಕ ವಯಸ್ಸಿನಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ಮಾರ್ಗದರ್ಶನದಲ್ಲಿ ಜೀವನ ಸಾಗಿಸುವ ಮೂಲಕ ಮಾದರಿಯಾಗಿದ್ದರು ಎಂದರು.
ಶ್ರೇಷ್ಠ ಶಿಕ್ಷಕ ಸನ್ಮಾನ ಸ್ವೀಕರಿಸಿದ ಡಾ|| ಚಂದ್ರಕಾಂತ ಹೊಸೂರು ಮಾತನಾಡಿ, ಶ್ರೇಷ್ಟ ವೈದ್ಯರ ಸಾಲಿನಲ್ಲಿ ನಿಲ್ಲುವ ಡಾ|| ಸ.ಜ ನಾಗಲೋಟಿಮಠ ಭಾರತೀಯ ಆಹಾರ ಪದ್ದತಿ ಹಾಗೂ ರೋಗ ವೈದಾನಿಕತೆಯನ್ನು ಸರಳ ನುಡಿಗಳಲ್ಲಿ ವಿದ್ವತ ಕೇಳುವುದೇ ಒಂದು ಭಾಗ್ಯವಾಗಿತ್ತು. ಅಂತಕ ಮಹನೀಯ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ನಾನು ಪುರಸ್ಕೃತನಾಗಿರುವುದು ನನಗೆ ಇನ್ನಷ್ಟೂ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಪ್ರಾಚಾರ್ಯ ಸುರೇಶ ಬಿರಾದರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಅಶೋಕ ರಾಮದುರ್ಗ, ಉಪನ್ಯಾಸಕರಾದ ಶ್ರೀದೇವಿ ಪಾಟೀಲ, ಡಾ|| ಲಿಂಗಾನಂದ ಗವಿಮಠ ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದ್ದಾರೆ.