
ಪುತ್ತೂರು: ನಿನ್ನೆ ಸಾಯಂಕಾಲ ಮಂಗಳೂರಿನಿಂದ ಪುತ್ತೂರಿನ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು. ಆರೋಪಿಯಾದ ತೌಹೀದ್ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸರಿಸುಮಾರು ಸಂಜೆ 06.30 ಗಂಟೆಗೆ ಮಂಗಳೂರಿನಿಂದ ಪುತ್ತೂರಿನ ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿ ಪ್ರಯಾಣಿಸುತ್ತಿದ್ದು ಬಸ್ಸು ಬಂಟ್ವಾಳ ತಾಲ್ಲೂಕಿನ ಮಾಣಿ ಬಳಿ ಬಂದಾಗ ಆರೋಪಿ ವಿದ್ಯಾರ್ಥಿನಿಯ ಹತ್ತಿರ ಕೆಟ್ಟವರ್ತನೆ ಮಾಡಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ವಿದ್ಯಾರ್ಥಿನಿ ತನ್ನ ತಂದೆಗೆ ಕರೆ ಮಾಡಿದ್ದಾಳೆ. ಪುತ್ತೂರಿನ ಬಸ್ ನಿಲ್ದಾಣಕ್ಕೆ ತಲುಪುತಿದ್ದಂತೆ ಆರೋಪಿ ತುರ್ತು ನಿಗಮದ ಕಿಟಕಿಯಿಂದ ಹಾರಲು ಪ್ರಯತ್ನಿಸಿದ್ದಾನೆ. ಅಲ್ಲೇ ಇದ್ದ ವಿದ್ಯಾರ್ಥಿನಿಯ ತಂದೆ ಸ್ಥಳೀಯರ ಸಹಾಯದಿಂದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.