
ಶೃಂಗೇರಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿಗರು ರೋಸಿ ಹೋಗಿದ್ದಾರೆ. ಈಗಾಗಲೇ ಶೃಂಗೇರಿಯಲ್ಲಿ 2600 ಮಿ.ಮೀ ಗೂ ಅಧಿಕ ಮಳೆಯಾಗಿದ್ದು ಹಿಂದಿನ ವರ್ಷ 1400 ಮಿ.ಮೀ ಮಳೆ ದಾಖಲಾಗಿತ್ತು. ಅವಧಿಗೂ ಮುನ್ನ ಶುರುವಾದ ಮಳೆಯಿಂದಾಗಿ ಅಡಿಕೆ, ಕಾಫಿ, ಕಾಳು ಮೆಣಸು ಬೆಳಗಳಲ್ಲಿ ಕೊಳೆ ರೋಗದ ಭೀತಿ ಕಂಡು ಬಂದಿದೆ. ಇದಲ್ಲದೆ ಭತ್ತ ನಾಟಿಗೂ ಸಹ ಮಳೆರಾಯ ಸಂಕಷ್ಟ ತಂದೋಡ್ಡಿದ್ದಾನೆ. ಬಿಡದೇ ಕಾಡುತ್ತಿರುವ ಮಳೆಯಿಂದಾಗಿ ಮಲೆನಾಡಿನ ಜನರಿಗೆ ಸೂರ್ಯನ ದರ್ಶನವಾಗದಂತಾಗಿದೆ.