
ಸೌದಿ ಅರೇಬಿಯಾ: ಸೌದಿಯ ರಾಜಕುಮಾರ ವಲೀದ್ 1990 ರ ಏಪ್ರಿಲ್ನಲ್ಲಿ ಜನಿಸಿದ್ದು, 15 ನೇ ವಯಸ್ಸಿನಲ್ಲಿ ತನ್ನ ಪ್ರಜ್ಞೆಯನ್ನ ಕಳೆದುಕೊಂಡಿದ್ದರಿಂದ ಅವರನ್ನ ವಿಶೇಷ ಕೊಠಡಿಯಲ್ಲಿಟ್ಟು 24 ಗಂಟೆಯೂ ಚಿಕಿತ್ಸೆ ನೀಡಲಾಗಿತ್ತು. ಕಳೆದ 20 ವರ್ಷದಿಂದ ಕೋಮಾದಲ್ಲಿದ್ದ ಕಾರಣ ಇವರು “ಸ್ಲೀಪಿಂಗ್ ಪ್ರಿನ್ಸ್” ಎಂದು ಖ್ಯಾತಿಯಾಗಿದ್ದು ಶನಿವಾರ ನಿಧನವಾಗಿದ್ದಾರೆಂದು, ಜೊತೆಗೆ ನಿಧನದ ಗೌರವ ಸೂಚಕವಾಗಿ ಭಾನುವಾರ, ಸೋಮವಾರ ಮತ್ತು ಮಂಗಳವಾರ ಸಂತಾಪ ಸಭೆ ನಡೆಸಲಾಗುವು ಎಂದು ವಲೀದ್ ಅವರ ತಂದೆ ಪ್ರಿನ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.