
ಉಪ್ಪಿನಂಗಡಿ: ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಅರಣ್ಯದ ಅಂಚಿನಲ್ಲಿರುವ ಪೆರಿಯಶಾಂತಿ ಮಾರ್ಗದುದ್ದಕ್ಕೂ ಇರುವಂತಹ ಅನುಮತಿಯಿಲ್ಲದ ಗೂಡಂಗಡಿಗಳನ್ನು ಇಂದು ಮಧ್ಯಾಹ್ನದ ಒಳಗಾಗಿ ತೆರವುಗೊಳಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಈಗಾಗಲೇ ಪ್ರಧಾನಮಂತ್ರಿ ಕಾರ್ಯಾಲಯದಿಂದ ಜೂನ್ 27 ರಂದೇ ಅರಣ್ಯ ವ್ಯಾಪ್ತಿಗೆ ಸೇರಿದ ಅನಧಿಕೃತ ಗೂಡಂಗಡಿಗಳನ್ನು ಕೂಡಲೇ ತೆರವುಗೊಳಿಸುವಂತೆ ಮೌಖಿಕ ಆದೇಶ ನೀಡಲಾಗಿತ್ತು. ಅರಣ್ಯ ವ್ಯಾಪ್ತಿಯ ಪ್ರದೇಶಗಳಾದ ಪೆರಿಯಶಾಂತಿ, ಪಾರ್ಪಿಕಲ್ಲು, ನಿಡ್ಲೆ, ಕುದ್ರಾಯವರೆಗಿದ್ದು. ಪ್ರಧಾನ ಮಂತ್ರಿ ಕಾರ್ಯಾಲಯದ ಆದೇಶದಿಂದ ಕಾಲಾವಕಾಶ ಕೋರಿದ ಗೂಡಂಗಡಿಗಳ ವ್ಯಾಪಾರಸ್ಥರು ದಿನಾಂಕ 15-07-2025ರ ಒಳಗಾಗಿ ತೆರವುಗೊಳಿಸುವುದಾಗಿ ಹೇಳಿದ್ದರು. ಕೆಲವು ಅನಧಿಕೃತ ಗೂಡಂಗಡಿಗಳ ವ್ಯಾಪಾರಸ್ಥರು ಕಾಲವಕಾಶ ಮುಗಿದರೂ ಕೂಡ ತೆರವುಗೊಳಿಸದ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದ ಒಳಗೆ ಸಂಪೂರ್ಣವಾಗಿ ಅಂಗಡಿಗಳನ್ನು ತೆಗೆಯಬೇಕೆಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಸಂಬಂಧ ಪಟ್ಟ ವ್ಯಾಪಾರಸ್ತರು ಅಂಗಡಿಗಳನ್ನು ತೆರವುಗೊಳಿಸದೇ ಇದ್ದಲ್ಲಿ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ನಡೆಸುವುದಾಗಿ ತಿಳಿಸಿದೆ.
ಕಾಡಾನೆಗಳು ದಾಳಿ ನಡೆಸುತ್ತಿದ್ದು. ವ್ಯಾಪಾರ ನಡೆಸುತ್ತಿರುವ ಪ್ರದೇಶಗಳಿಗೆ ಹೋಗಿ ಹಣ್ಣುಗಳನ್ನು ತಿನ್ನುತ್ತಿದ್ದು. ಅರಣ್ಯಗಳಿಗೆ ಆನೆಗಳನ್ನು ಕಳುಹಿಸುವ ಕಾರ್ಯವು ರಾತ್ರಿ ನಡೆಯುತ್ತಿದೆ. ರಸ್ತೆ ಬದಿಗಳಲ್ಲಿ ಎಸೆದಿರುವ ಹಣ್ಣುಗಳನ್ನು ತಿನ್ನಲು ಆನೆಗಳು ಬರುತ್ತಿವೆ ಎನ್ನಲಾಗಿದೆ. ಇದರಿಂದಾಗಿ ಪ್ರಾಣಿಗಳಿಂದ ಯಾವುದೇ ರೀತಿಯ ತೊಂದರೆಗಳಾದರೂ ಅರಣ್ಯ ಇಲಾಖೆಯು ಹೊಣೆಯಾಗುವುದಿಲ್ಲ ಹಾಗೂ ಅನಧಿಕೃತ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು