
ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಧಾರಕಾರ ಮಳೆ ಸುರಿದಿದ್ದು, ಈ ಮಧ್ಯೆಯು ಗಿರಿ ಭಾಗಕ್ಕೆ ದಿನೇ ದಿನೇ ಪ್ರವಾಸಿಗರು ಹೆಚ್ಚುತ್ತಿದ್ದಾರೆ. ಕಾರು-ಬೈಕ್-ಟಿಟಿ ಸೇರಿ ಒಟ್ಟು ೧೮೫೦ ವಾಹನಗಳು ಗಿರಿಧಾಮಕ್ಕೆ ಬೇಟಿ ನೀಡಿದ್ದು, ಭಾರೀ ಮಳೆಗೆ ಮುಳಯ್ಯನಗಿರಿಯಿಂದ ಕೆಳಗೆ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಜೀಪ್ಗೆ ಮಖಾಮುಖಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ಸುರಿಯುತ್ತಿರೋ ಮಳೇ ಮಧ್ಯದಲ್ಲಿ ಗಾಡಿ ಕಂಟ್ರೋಲ್ ಮಾಡಲಾಗದೆ 2 ಗಂಟೆಗಳ ಕಾಲ ವಾಹನಗಳನ್ನ ಸ್ಟಾಪ್ ಮಾಡಿ ಪೋಲಿಸರು ಹರಸಾಹಸ ಮಾಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.