
ಮೈಸೂರು: ನಾಡದೇವತೆ ಚಾಮುಂಡೇಶ್ವರಿ ವರ್ಧಂತಿಯ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭಕ್ತರ ಸಾಗರವೇ ಹರಿದು ಬಂದಿತ್ತು . ಭಕ್ತರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು , ಇಂತಹ ಸಮಯದಲ್ಲಿ ಬೆಟ್ಟದ ಮೇಲೇರಿದ್ದ ಬಸ್ಸ್ ನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಅಲ್ಲಿನ ಜನರು ಆತಂಕಕ್ಕೊಳಗಾಗಿದ್ದರು. ಭಕ್ತರ ನೆರವಿಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯವರಾದ ಬಿಂದುಮಣಿಯವರು ಸಮಯಪ್ರಜ್ಞೆಯಿಂದ ಗಾಬರಿಯಾದ ಭಕ್ತರಿಗೆ ಸ್ಥೈರ್ಯ ತುಂಬಿ, ಸಹಾಯ ಮಾಡಿದ್ದಾರೆ. ಡಿಸಿಪಿಯವರ ತಕ್ಷಣದ ನಿಧಾðರಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತ ವಾಗುತ್ತಿದೆ.