
ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, 2024-2025ನೇ ಸಾಲಿನ “ಸ್ವಚ್ಛ ನಗರ ಸರ್ವೇಕ್ಷಣ” ಶ್ರೇಯಾಂಕ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ ಸತತ 8ನೇ ಬಾರಿಗೆ ದೇಶದ “ಅತ್ಯಂತ ಸ್ವಚ್ಛ ನಗರ” ಎಂಬ ಹೆಗ್ಗಳಿಕೆಗೆ ಪ್ರಾತವಾಗಿದ್ದು, 4500 ನಗರಗಳಲ್ಲಿ ಮುಖಾಮುಕಿ ಸಮೀಕ್ಷೆ , ಸಾಮಾಜಿಕ ಜಾಲತಾಣ, ಸೇರಿದಂತೆ ಇನ್ನಿತರ ವೇದಿಕೆಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಪ್ರಕಟಿಸಲಾಗಿದೆ. ಸೂಪರ್ ಸ್ವಚ್ಛ ಲೀಗ್ ವಿಭಾಗದಲ್ಲಿ ಗುಜಾರತ್ನ ಸೂರತ್ 2 ನೇ ಸ್ಥಾನ ಸಂದಿದೆ. ಅದೇ ರೀತಿ ನಮ್ಮ ರಾಜ್ಯಕ್ಕೂ ಎರಡು ಪ್ರಶಸ್ತಿಗಳೂ ದೊರೆತಿದೆ. 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿದ್ದ ಈ ಪಟ್ಟಿಯಲ್ಲಿ “ಸಾಂಸ್ಕೃತಿಕ ನಗರಿ” ಎಂದು ಖ್ಯಾತಿಯಾಗಿರುವ ಮೈಸೂರು 3ನೇ ಸ್ಥಾನದಲ್ಲಿದ್ದು, “ಮಿನಿಸ್ಟ್ರೀಯಲ್ ಅವಾರ್ಡ್” ಎಂಬ ಪುರಸ್ಕಾರಕ್ಕೆ ದಾವಣಗೆರೆಗೆ ಮನ್ನಣೆ ದೊರೆತಿದೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿಯಾದ ದ್ರೌಪದಿ ಮುರ್ಮುರವರು ಪ್ರಧಾನ ಮಾಡಿದ್ದಾರೆ.