
ಅಭಿನಯ ಸರಸ್ವತಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿ. ಸರೋಜ ದೇವಿಯವರು ಇಂದು ತಮ್ಮ ನಿವಾಸವಾದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಿಧಿವಶರಾಗಿದ್ದಾರೆ. ಇವರು 1938 ಜನವರಿ 7ರಂದು ಜನಿಸಿದರು. ಇವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದರು. ಕಿತ್ತೂರುರಾಣಿ ಚೆನ್ನಮ್ಮ ಚಿತ್ರರಂಗದ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ ಇವರು ನಂತರ ಅಮರಶಿಲ್ಪಿ ಜಕಣಚಾರಿ, ಕಥಾಸಾಗರ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗವನ್ನು ಆಳಿದರು. 2010ರಲ್ಲಿ, ಭಾರತೀಯ ವಿದ್ಯಾ ಭವನದಲ್ಲಿ ” ಪದ್ಮಭೂಷಣ ಬಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ” ಲಭಿಸಿದ್ದು, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಕೊನೆಯುಸಿರೆಳೆದಿದ್ದಾರೆ.