
ಕಡೂರು: ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಗೆ ಹಾರುವಾಗ ನವಿಲೊಂದು ಬಸ್ಸಿನ ಗಾಜಿಗೆ ಡಿಕ್ಕಿ ಹೊಡೆದು ಸಾವನಪ್ಪಿದೆ. ನವಿಲನ್ನು ಕಂಡು ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದಾರೆ. ಬಸ್ಸಿನ ಗಾಜು ಒಡೆದು ಹೋಗಿದ್ದು, ನವಿಲು ಸಾವಿಗೀಡಾಗಿದೆ. ಕಡೂರು ತಾಲ್ಲೂಕಿನ ಮಚ್ಚೇರಿ ಬಳಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.