
ಕುಂದಾಪುರ: ರಕ್ತದಾನವು ಉದ್ಧಾತ ಕಾರ್ಯವಾಗಿದೆ. ರಕ್ತದಾನದಿಂದ ಯಾವುದೇ ಹಾನಿಯುಂಟಾಗುವುದಿಲ್ಲ ಹೊರತಾಗಿ ಆರೋಗ್ಯಕ್ಕೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಕುಂದಾಪುರ ಶಾಸಕರಾದ ಎ. ಕಿರಣ್ಕುಮಾರ್ ಕೊಡ್ಗಿ ತಿಳಿಸಿದರು.
ಆನೆಗಳ್ಳಿ ಗೆಳೆಯರ ಬಳಗ ಕಲಾಮಂದಿರದಲ್ಲಿ ಭಾನುವಾರ ನಡೆದ ಬೃಹತ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕೋಟ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಮ್ಮೂರು ಹಬ್ಬದ ಲಾಂಛನವನ್ನು ಕನ್ನಡ ಚಲನಚಿತ್ರ ನಟ, ನಿರ್ಮಾಪಕ ರವಿ ಬಸ್ರೂರ ಹಾಗೂ ನಟ ಪ್ರದೀಪ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.
ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ, ಗೆಳೆಯರ ಬಳಗ ಅಧ್ಯಕ್ಷ ಗಣೇಶ್ ಕೆ, ರೋಟರಿ ಕ್ಲಬ್ ಮಿಡ್ಟೌನ್ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಬಿ.ಬಿ ಹೆಗ್ಡೆ, ಪತ್ರಕರ್ತ ನಾಗರಾಜ್ ರಾಯಪ್ಪನ ಮಠ, ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಶಮಿ ಶಾಸ್ತ್ರಿ, ಕಾಲೇಜು ಉಪನ್ಯಾಸಕ ಚೇತನ್ ಶೆಟ್ಟಿ ಕೋವಾಡಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಕಾರ್ಯಕ್ರಮದ ಆಯೋಜಕ ಶರತ್ ಕಾಂಚನ್ ಆನೆಗಳ್ಳಿ ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.