
2023 ರಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಜ್ಯದ ಕರಾವಳಿ ಸಮುದ್ರ ಆಂಬುಲೆನ್ಸ್ನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆಯೆ ಮುಂದಿನ ವರ್ಷ ರಾಜ್ಯದ ಮೊದಲ ಸಮುದ್ರ ಆಂಬುಲೆನ್ಸ್ ಆರಂಭಗೋಳ್ಳಲಿದೆ.
ಮೀನುಗಾರಿಕೆ ಇಲಾಖೆ 7.85 ಕೋಟಿ ರೂ ವೆಚ್ಚದಲ್ಲಿ 800 ಎಚ್ಪಿ ಎಂಜಿನ್ ಸಾರ್ಮರ್ಥ್ಯದ ಆಂಬುಲೆನ್ಸ್ ನಿರ್ಮಿಸಲಿದೆ. ಇದು ಮೀನುಗಾರರಿಗೆ ತುರ್ತು ವೈದ್ಯಕೀಯ ನೆರವು ನೀಡಲಿದ್ದು. ಅಗತ್ಯ ವೈದ್ಯಕೀಯ ಉಪಕರಣಗಳು, ಬೆಂಕಿ ನಂದಕ ಸಾಧನಗಳು ಮತ್ತು ಜೀವ ರಕ್ಷಕ ಪರಿಕರಗಳನ್ನು ಒಳಗೊಂಡಿರುತ್ತದೆ. ರಾಹುಲ್ ಗಾಂಧಿಯವರ ಭರವಸೆಯಂತೆ 2024-25 ರ ಬಜೆಟ್ನಲ್ಲಿ ಈ ಯೋಜನೆ ಅನುಮೋದನೆಗೊಳ್ಳಲಿದೆ.
ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೆರ್ ರವರು ಮೀನುಗಾರ ಸಮುದಾಯದ ಬೇಡಿಕೆಗೆ ಪೂರಕವಾಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ವಾರ ನಿರ್ಮಾಣ ಕಾರ್ಯಾದೇಶ ನೀಡಲಿದೆ. ಇದಾದ ಸುಮಾರು ಏಳು ತಿಂಗಳಲ್ಲಿ ಆಂಬುಲೆನ್ಸ್ ಸಿದ್ದಗೊಳ್ಳಲಿದೆ ಎಂದಿದ್ದಾರೆ.
ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗೆ ಆಂಬುಲೆನ್ಸ್ ತುರ್ತು ವೈದ್ಯಕೀಯ ನೆರವು ನೀಡಲಿದೆ. 800 ಎಚ್ಪಿ ಎಂಜಿನ್ ಸಾಮಥ್ಯದ ಆಂಬುಲೆನ್ಸ್ನಲ್ಲಿ ನಾಲ್ಕು ಮಂದಿ ಅರೆವೈದ್ಯಕೀಯ ಸಿಬ್ಬಂದಿ ಮತ್ತು 4-5 ಹಾಸಿಗೆಗಳು ಇರಲಿವೆ. ರೆಫ್ರಿಜರೇಟರ್, ಸ್ಟ್ರೆಚರ್, ಆಕ್ಸಿಜನ್ ಘಟಕ ಹಾಗೂ ಶವಗಾರ ವ್ಯವಸ್ಥೆ ಇರಲಿವೆ.