
ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ನಗರ ಘಟಕವು ಪಾಲಿಕೆ ಜಾಗದಲ್ಲಿ ಅಕ್ರವಾಗಿ ಕಟ್ಟಿರುವ ಕಟ್ಟಡಗಳನ್ನು ತಕ್ಷಣ ತೆರವು ಗೊಳಿಸುವಂತೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು. ಹಾಗೆಯೇ ಶಾಸಕ ಎಸ್. ಎನ್ ಚನ್ನಬಸಪ್ಪ ಪಾಲಿಕೆ ಆಯುಕ್ತರಿಗೆ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಸಿದ್ದಿಕಿ ಎಂಬ ಮುಸ್ಲಿಂ ಯುವಕ ರಸ್ತೆ ಪಕ್ಕದಲ್ಲಿನ ಪಾಲಿಕೆ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದು, ಕೆಲ ದಿನಗಳಿಂದ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯರು ಸರ್ಕಾರದ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ ಇದರಿಂದಾಗಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಹಾಗೆಯೇ ಕಟ್ಡಡ ನಿರ್ಮಾಣ ಅಕ್ರಮವಾಗಿದ್ದರೆ ಅದನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಜೂನ್ ೫ ರಂದು ಕೆಲ ಮುಸ್ಲಿಂ ಕಿಡಿಗೇಡಿಗಳು ರಾಗಿ ಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಗರದಲ್ಲಿನ ಶಾಂತಿ, ಸೌಹಾರ್ಧತೆಯನ್ನು ಹಾಳು ಮಾಡುವ ಸಲುವಾಗಿ ಬಡಾವಣೆಯಲ್ಲಿದ್ದ ನಾಗರ ದೇವರ ವಿಗ್ರಹವನ್ನು ಚರಂಡಿಗೆ ಹಾಕಿ, ಗಣೇಶನ ಮೂರ್ತಿಯನ್ನು ಕಾಲಿನಿಂದ ಒದ್ದಿರುವುದು ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದೆ. ಅನ್ಯಕೋಮಿನವರು ಸಾರ್ವಜನಿಕರಿಗೆ ಮೀಸಲಿಟ್ಟ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ಈಗಾಗಲೆ ನಿರ್ಮಾಣ ಮಾಡಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಆ ಪ್ರದೇಶದಲ್ಲಿರುವ ಎಲ್ಲಾ ಜಾಗಗಳಿಗೆ ಬೇಲಿ ಹಾಕಿ, ಸ್ವಚ್ಚತೆ ಮಾಡಿಸಿ ಪಾಲಿಕೆ ವಶಕ್ಕೆ ಪಡೆಯಬೇಕು ಎಂದರು.
ಆಯುಕ್ತ ಮಾಯಣ್ಣ ಗೌಡ ಮನವಿಯನ್ನು ಸ್ವೀಕರಿಸಿ ಶಿವಮೊಗ್ಗ ನಗರದಲ್ಲೂ ಪಾಲಿಕೆ ಆಸ್ತಿ ಕಬಳಿಕೆ ಆಗಿದ್ದು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಕೆಡವಲಾಗುತ್ತದೆ. ಕರ್ನಾಟಕ ಮುನ್ಸಿಪಾಲ್ಟಿ ಕಾಯ್ದೆಯ ೧೮೭ನೆ ವಿಧಿಯ ಅನ್ವಯ ಪಾಲಿಕೆ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟಿದರೆ ಅವುಗಳನ್ನು ಮುಲಾಜಿಲ್ಲದೆ ನೆಲಸಮ ಮಾಡಲಾಗುವುದು ಎಂದಿದ್ದಾರೆ. ಎರಡು ದಿನದ ಒಳಗಾಗಿ ಅನಧಿಕೃತ ಕಟ್ಟಡವನ್ನು ನೆಲಸಮ ಮಾಡಲಾಗುವು ಎಂದರು.