
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್ಗಳು ಅಥವಾ ಶಿಲೀಂಧ್ರಗಳು ಸೋಂಕುಗಳು ಬಹಳ ಸುಲಭವಾಗಿ ಹರಡುತ್ತದೆ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಬಲ ಪಡಿಸಿಕೊಳ್ಳಲು ೭ ವಿಶೇಷ ಆಹಾರ ಉತ್ಪನ್ನಗಳ ಬಗ್ಗೆ ತಿಳಿಸಲಾಗಿದೆ.
* ತುಳಸಿ:- ಶಿತ, ಕೆಮ್ಮು, ಜ್ವರ, ಗಂಟಲು ನೋವನ್ನು ನಿವಾರಿಸುತ್ತದೆ ಹಾಗೂ ತುಳಸಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಬಳಸುವ ಕ್ರಮ:* 4-5 ತುಳಸಿ ಎಲೆಗಳನ್ನು ಪ್ರತಿದಿನ ಅಗೆಯಿರಿ
* ಸೂಪ್ ಅಥವಾ ತರಕಾರಿಗಳಿಗೆ ಸೇರಿಸುವ ಮೂಲಕ ಸೇವಿಸಬಹುದು
* ಚಹಾ ಅಥವಾ ಕಷಾಯಕ್ಕೆ ತುಳಸಿಯನ್ನು ಸೇರಿಸಬಹುದು.
* ಶುಂಠಿ:- ಶುಂಠಿಯು ವೈರಲ್ ವಿರೋಧಿ, ಬ್ಯಾಕ್ಟಿರಿಯಾ ವಿರೋಧಿ, ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು. ಶುಂಠಿಯು ದೇಹವನ್ನು ಬೆಚ್ಚಗಿರಿಸುತ್ತದೆ ಹಾಗೆಯೇ ಸೊಂಕನ್ನು ತಡೆಯುತ್ತದೆ. ಗಂಟಲು ನೋವು, ಶಿತ, ಕೆಮ್ಮು, ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ.
ಬಳಸುವ ಕ್ರಮ: * ತರಕಾರಿ ಅಥವಾ ಬೇಳೆಗಳಿಗೆ ಶುಂಠಿಯನ್ನು ಸೇರಿಸಬಹುದು.
* ಶುಂಠಿ ಚಹಾ ಕುಡಿಯಿರಿ.
* ಜೇನು ತುಪ್ಪದೊಂದಿಗೆ ಶುಂಠಿ ರಸವನ್ನು ಸೇವಿಸಬಹುದು.
* ಅರಿಶಿನ:- ದೇಹದಲ್ಲಿನ ಉರಿಊತವನ್ನು ಕಡಿಮೆ ಮಾಡುವುದರ ಜೊತೆಗೆ, ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಸೋಂಕನ್ನು ತಡೆಗಟ್ಟವುದರಲ್ಲೂ ಇದು ಪಾತ್ರ ವಹಿಸುತ್ತದೆ. ಅರಿಶಿನದ ಬಳಕೆಯು ಶೀತ, ಗಂಟಲು ನೋವು ಮತ್ತು ವೈರಲ್ ಸೋಂಕುಗಳಲ್ಲಿ ಪರಿಣಾಮಕಾರಿಯಾಗಿದೆ ಎಂದು ತಿಳಿದು ಬಂದಿದೆ. ಅರಿಶಿನವು ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಬಳಸುವ ಕ್ರಮ: * ಅರಿಶಿನ, ಜೇನು ತುಪ್ಪ ಹಾಗೂ ಶುಂಠಿಯ ಕಷಾಯವನ್ನು ತಯಾರಿಸಬಹುದು.
* ತರಕಾರಿಗಳು, ಬೇಳೆಗಳು ಅಥವಾ ಸೂಪ್ಗೆ ಅರಿಶಿನವನ್ನು ಸೇರಿಸಬಹುದು.
* ಹಾಲಿಗೆ ಅರಿಶಿನ ಸೇರಿಸಿ ಕುಡಿಯಬಹುದು.