
ನಿನ್ನೆ ಸಹಸ್ರಾರು ಸಂಖ್ಯೆಯಲ್ಲಿ ಜೋಗ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸಿದ್ದು, ಕಿ.ಮೀಗಳ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವೀಕೆಂಡ್ ಕಾರಣದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು. ಹಾಗೆಯೇ ಜೋಗ ಜಲಪಾತದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥಿವಾದ ಜಾಗವನ್ನು ಕಲ್ಪಿಸಲು ಸಾಧ್ಯವಾಗಲಿಲ್ಲ.
ಜೋಗ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಪೋಲಿಸ್ ಸಿಬ್ಬಂಧಿ ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಟ್ಟರು. ಜೆಎಂಎ ಖಾಸಗಿ ಭದ್ರತಾ ಸಿಬ್ಬಂಧಿ ವಾಹನ ದಟ್ಟಣೆ ಸುಗಮಗೊಳಿಸಿದರು. ಶರಾವತಿ ಕಣಿವೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಆರಿದ್ರ ಮಳೆಯಿಂದ ವಿಶ್ವ ವಿಖ್ಯಾತ ಜೋಗ ಜಲಪಾತವು ಮೈದುಂಬಿ ಹರಿಯುತ್ತಿದ್ದು. ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಆಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಜಲಪಾತದ ಮುಖ್ಯ ವಿಕ್ಷಣಾ ಸ್ಥಳದಲ್ಲಿ ಪ್ರವಾಸಿಗರು ತುಂಬಿ ಹೋಗಿತ್ತು. ಹೊಗೆ ಸುರಿದು ಧುಮ್ಮಿಕ್ಕುವ ಜಲಪಾತದ ಸೌಂದರ್ಯ ವೀಕ್ಷಿಸಲು ಪ್ರವಾಸಿಗರು ಕಾಯುತ್ತಾ ನಿಲ್ಲುವಂತಾಗಿತ್ತು.