
ಕೊಟ್ಟಿಗೆಹಾರ: ನಿಡುವಳೆ ಗ್ರಾಮ ಪಂಚಾಯಿತಿಯಿಂದ ಸ್ಥಳಿಯ ಗ್ರಾಮಸ್ಥರಿಗೆ ಕಾನೂನು ಬದ್ಧವಾಗಿ ಮರಳನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಹಳ್ಳದಲ್ಲಿ ಲಭ್ಯವಿರುವ ಮರಳನ್ನು ಕಡ್ಡಾಯವಾಗಿ ಪರ್ಮಿಟ್ ಮೂಲಕ ಮಾತ್ರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಳನ್ನು ಎತ್ತುವ ಪ್ರಕ್ರಿಯೆ ಸುಗಮವಾಗಿ ನಡೆಯಲು ಪಂಚಾಯಿತಿಯಿಂದ ೭ ಜನರ ನಿಯೋಜಿತ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ಅರುಣ್, ಪ್ರಶಾಂತ್, ಬ್ಯಾಂಡ್ ರವಿ, ಲೋಕೇಶ್, ಸಾಗರ್, ಸಚಿನ್ ಹಾಗೂ ಚಂದ್ರು ಸೇರಿದ್ದಾರೆ. ಈ ಸದಸ್ಯರು ಮರಳನ್ನು ಪರ್ಮಿಟ್ ಪ್ರಕಾರ ಎತ್ತುವ ಕೆಲಸ ನಿರ್ವಹಿಸಲಿದ್ದಾರೆ.
ಹಳ್ಳದಿಂದ ಮರಳನ್ನು ಅಕ್ರವಾಗಿ ತೆಗೆಯುವುದು ಕಠಿಣವಾಗಿ ನಿಷೇದಿಸಲ್ಪಟ್ಟಿದ್ದು, ನಿಯಮ ಉಲ್ಲಂಘನೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಮರಳಿನ ಬೆಲೆ ನಿಗದಿಸುವಲ್ಲಿ ಪಂಚಾಯಿತಿ ಅಧ್ಯಕ್ಷರು ಗುಲಾಬಿ, ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಸದಸ್ಯರಾದ ಅರುಣ್ ಕಮಲಮ್ಮ, ಸಚಿನ್ ಮರ್ಕಲ್, ಲಕ್ಷೀ ಮರ್ಕಲ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಲೆ ಮಹೇಶ್ ಬಾಗವಹಿಸಿದ್ದರು. ಇವರ ತೀರ್ಮಾನದಂತೆ ಮರಳಿನ ದರವನ್ನು ನಿಗದಿಪಡಿಸಲಾಗುವುದು. ಗ್ರಾಮ ಪಂಚಾಯಿತಿಯ ಈ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಇದು ಮರಳಿನ ಕಳ್ಳಸಾಗಣೆಗೆ ಕಡಿವಾಣ ಹಾಕಲು ಸಹಾಯಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.