
ಮೈಸೂರು: ಚಾಮುಂಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿ ಯಾಗಬೇಕೆಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಸುದ್ದಿಗಾರರೊಂದಿಗೆ ಮಾತನಾನಾಡಿದ ಅವರು ಚಾಮುಂಡಿ ಬೆಟ್ಟದಲ್ಲೂ ತಿರುಪತಿ ಮಾದರಿಯಲ್ಲಿ ಮೊಬೈಲ್ ನಿರ್ಬಂಧಿಸಬೇಕು, ಇತ್ತೀಚೆಗೆ ಕೆಲವರು ತಿಳಿದೋ ತಿಳಿಯದೆಯೇ ದೇವಿಯ ಮೂಲ ವಿಗ್ರಹದ ವೀಡಿಯೋ ಮಾಡುತ್ತಾರೆ. ಇದು ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.