
ಮಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಪ್ರಾರಂಭಿಸಲು ಶಿಕ್ಷಣ ಇಲಾಖೆಯು ನಿರ್ಧರಿಸಿತ್ತು. ಆದರೆ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಯನ್ನು ಆರಂಭಿಸಿದರೆ ಅಂಗನವಾಡಿಗಳನ್ನು ಮುಚ್ಚಬೇಕಾದ ಪರಿಸ್ಥತಿ ಎದರಾಗಬಹುದು ಎನ್ನುವ ಕಾರಣಕ್ಕೆ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಕೇಂದ್ರವನ್ನು ಆರಂಭಿಸುವಂತೆ ಅಂಗವಾಡಿಯ ಕಾರ್ಯಕರ್ತೆಯರು ಹಾಗೂ ಸಹಾಯಿಕೀಯರು ಸಂಘಟನೆಗೆ ಒತ್ತಾಯಿಸಿದ್ದು. ಇದರಿಂದಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ – ಯು.ಕೆ.ಜಿ ಯನ್ನು ತೆರೆಯಲು ಸಮ್ಮತಿ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 70 ಹಾಗೂ ಉಡುಪಿ ಜಿಲ್ಲೆಯ 40 ಅಂಗನವಡಿಗಳಲ್ಲಿ ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೂರ್ವ ಸಿದ್ಧತೆ ಪ್ರಾರಂಭಿಸಿದೆ. ಒಟ್ಟು ಕರಾವಳಿಯಲ್ಲಿ 110 ಅಂಗನವಾಡಿಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಆರಂಭಿಸಲು ಸಿದ್ಧತೆ ನಡೆಸಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿವ ವಾತವರಣವನ್ನು ನಿರ್ಮಿಸಲಾಗಿದೆ. ಇಂದಿನಿಂದ ಆರಂಭವಾಗುವ ನಿರೀಕ್ಷೆಯಿದ್ದು. ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಶೈಲಾ ಕೆ ಕಾರಿಗಿ ಯವರು ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಸಹಾಯಕೀಯರಿಗೆ ಹಂತ ಹಂತವಾಗಿ ವಿಶೇಷ ತರಭೇತಿಗಳನ್ನು ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಹಾಗೆಯೇ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಬೋಧನೆ ಹಾಗೂ ಆಹಾರವನ್ನು ಸರ್ಕಾರದಿಂದ ಇಲಾಖೆ ಒದಗಿಸುತ್ತದೆ. ಸೂಕ್ತ ವ್ಯವಸ್ಥೆಗಳಿರುವ ಅಂಗನವಾಡಿಗಳನ್ನು ಆಯ್ಕೆ ಮಾಡಿ ಅಲ್ಲಿಗೆ ಸ್ಮಾರ್ಟ್ ಟಿವಿ ಹಾಗೂ ಪಠ್ಯ ಪುಸ್ತಕವನ್ನು ಪೂರೈಸಲಾಗಿದೆ. ಸರ್ಕಾರದಿಂದ ಮಾರ್ಗದರ್ಶಿ ಬಂದ ಕೂಡಲೆ ತರಗತಿ ಪ್ರಾರಂಭವಾಗಲಿದೆ.