
ಶಿಕ್ಷಕರು ತರಭೇತಿ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವಿದರಿಂದ ಶಾಲೆಯಿಂದ ಹೊರ ಉಳಿಯುವಂತಾಗಿದ್ದು ಇದನ್ನು ತಡೆಗಟ್ಟಲು ಇನ್ನು ಮುಂದೆ ಯಾವುದೇ ತರಭೇತಿಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದೆಂದು ಸೂಚಿಸಿದ್ದಾರೆ. ಸಮಾಲೋಚನೆ ಕಾರ್ಯಕ್ರಮಗಳಂತಹ ಸಮಯದಲ್ಲಿ ಶಿಕ್ಷಕರು ಶಿಭಿರಾರ್ಥಿಗಳಾಗಿ ಭಾಗವಹಿತ್ತಿರುವಾಗ ಅಧಿವೇಶನದಲ್ಲಿ ತಮ್ಮ ಅನುಭವವನ್ನು ವ್ಯಕ್ತಪಡಿಸಲು ಅವಕಾಶ ನೀಡಬಹುದು. ಆದರೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತೊಂದು ಕೇಂದ್ರಕ್ಕೆ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಆಯೋಜಿಸಬಾರದು ಎಂದು ಸೂಚಿಸಿದ್ದಾರೆ.
ಜಿಲ್ಲೆಯಿಂದ ಎಂ.ಆರ್.ಪಿ ತರಭೇತಿಗಳಿಗೆ ತಂಡವನ್ನು ನಿಯೋಜಿಸುವಾಗ ಈ ಅಂಶಗಳನ್ನು ಗಮನದಲ್ಲಿರಿಸಿ ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಒ, ವಿಷಯ ಪರಿವೀಕ್ಷಕರು, ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರು ಮತ್ತು ಜಿಲ್ಲಾ ಮತ್ತು ಬ್ಲಾಕ್ ಹಂತದ ಶಿಕ್ಷಣಾಧಿಕಾರಿಗಳ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಮಾತ್ರ ನಿಯೋಜಿಸಲು ಸೂಚಿಸಿದೆ.
ಈ ಎಲ್ಲಾ ಅಂಶಗಳನ್ನು ಡಯಟ್ನ ಉಪನಿರ್ದೇಶಕರು ತಮ್ಮ ಅಧೀನ ಅಧಿಕಾರಿಗಳಿಂದ ಕಡ್ಡಾಯವಾಗಿ ಪಾಲನೆಯಾಗುತ್ತಿರುವುದನ್ನು ಖಚಿತ ಪಡೆಸಿಕೊಳ್ಳುವುದು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವ ಅಧಿಕಾರಿ ವೃಂದದವರ ಸಾಮರ್ಥ್ಯವನ್ನು ಹೆಚ್ಚಿಸಲು ಟಿ.ಇ ಯೋಜನೆಯಲ್ಲಿ ಕಾರ್ಯಕ್ರಮಗಳನ್ನು ಬಳಸಿಕೊಂಡು ಪರಿಣಾಮಕಾರಿ ಸಂಪನ್ಮೂಲ ಅಭಿವೃದ್ಧಿಗೆ ಶ್ರಮಿಸುವುದಾಗಿದೆ.