
ಮಂಗಳೂರು: ಮಂಗಳೂರಿನ ಹೊರವಲಯದ ಶಕ್ತಿ ನಗರz ಪದುವಾ ವ್ಯವಸಾಯ ಸಹಾಕಾರಿ ಸಂಘದಲ್ಲಿ ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನದ ಆಭರಣವನ್ನು ಅದೇ ಸೊಸೈಟಿಯ ಮ್ಯಾನೇಜರ್ ಆದಂತಹ ಪ್ರೀತೇಶ್ ಕದ್ದು, ಬೇರೆ ಸೊಸೈಟಿಯಲ್ಲಿ ಅಡವಿಟ್ಟು 3.5 ಕೋಟಿ ರೂಪಾಯಿ ಸಾಲವನ್ನು ಪಡೆದು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪ್ರೀತೇಶ್ ಸಹಕಾರ ನೀಡಿದ ಶೇಖ್ ಮೊಹಮದ್ ಎಂಬಾತನನ್ನು ಬಂಧಿಸಲಾಗಿದ್ದು. ಇನ್ನೂ ಇಬ್ಬರನ್ನು ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಪದವಾ ಸೊಸೈಟಿಯಲ್ಲಿ 20 ಮಂದಿ ಗ್ರಾಹಕರು ಅವರ ಕಷ್ಟದ ಸಮಯದಲ್ಲಿ ಚಿನ್ನವನ್ನು ಅಡವಿಟ್ಟಿದ್ದು. ಬ್ಯಾಂಕ್ ಮ್ಯಾನೇಜರ್ ತನ್ನ ಅಧಿಕಾರವನ್ನು ಸದುಪಯೋಗ ಪಡಿಸದೆ ದುರ್ಬಳಕೆ ಮಾಡಿಕೊಂಡಿದ್ದಾನೆ. ಆರೋಪಿಯು ವಂಚನೆ ಮಾಡಿದ ನಂತರ ಸಂಘದೊಳಗೆ ಸುದ್ದಿಯಾಗುತ್ತಿಂದಂತೆ ಬೆಂಗಳೂರಿಗೆ ಹೋಗಿ ಅಲ್ಲಿಂದ ವಿದೇಶಕ್ಕೆ ತೆರಳಿದ್ದಾನೆ. ಇದನ್ನು ತಿಳಿದ ಗ್ರಾಹಕರು ಸಂಘಕ್ಕೆ ಬಂದು ಗಲಾಟೆ ಮಾಡಲು ಮುಂದಾಗುತ್ತಾರೆ. ಜೂನ್ 17 ರಂದು ಪ್ರಕರಣ ದಾಖಲಾಗಿದ್ದು. ಆರೋಪಿ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಈ ಎಲ್ಲಾ ವಿಚಾರಗಳು ತಿಳಿಯುತಿದ್ದಂತೆ ಆರೋಪಿಯು ವಿದೇಶದಿಂದ ಮಂಗಳೂರಿಗೆ ಬಂದು ವಕೀಲರ ಮೂಲಕ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಪೋಲಿಸರು ಹೆಚ್ಚಿನ ವಿಚಾರಣೆ ಸಂಭಂದ ಆರೋಪಿಯನ್ನು ಕಸ್ಟಡಿಗೆ ಪಡೆಯಲಿದ್ದಾರೆ.