
ಭದ್ರಾವತಿ: ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದಲ್ಲಿ ಏಜೆನ್ಸಿ ಮೂಲಕ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ 3 ತಿಂಗಳ ವೇತನವನ್ನು ನೀಡದಿರುವ ಕಾರಣ ಪ್ರತಿಭಟನೆ ನಡೆಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಯಲ್ಲಿ ರಾಜಕೀಯ ನಾಯಕರು ಮುತುವರ್ಜಿ ಮಹಿಸಿದ್ದು, ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯ ಚುನಾವಣೆ ಹಿತದೃಷ್ಠಿಯಿಂದ ಮುಂದಾಳತ್ವ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.
ಕಳೆದ ಮೂರು ತಿಂಗಳುಗಳಿಂದ ಸಂಬಳ ನೀಡದೇ ಇರುವುದರಿಂದ ಮನೆ ನಡೆಸಲು ಬಹಳ ಕಷ್ಟವಾಗಿದೆ, ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ ಆದ್ದರಿಂದ ಈ ಪ್ರತಿಭಟನೆ ಮಾಡುಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳಿಗೆ ಹತ್ತು ದಿನದ ಸಂಬಳ ಬರುವುದು ತಡವಾದರೆ ಸಹಿಸಿಕೊಳ್ಳಲು ಆಗುವುದಿಲ್ಲ ಆದರೆ ನಮ್ಮಂತ ಕೆಳಮಟ್ಟದ ಹೌಸ್ ಕೀಪಿಂಗ್, ಹಾಸ್ಟೆಲ್, ಗಾರ್ಡನ್ ಇನ್ನಿತರ ಕೂಲಿ ಕಾರ್ಮಿಕರಿಗೆ ಮೂರು ತಿಂಗಳ ವೇತನ ನೀಡದಿದ್ದರೆ ನಮ್ಮ ಮಕ್ಕಳ ವಿದ್ಯಾಭಾಯಸಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಹೇಗೆ ಮಾಡುವುದು. ಕನಿಷ್ಟ ವೇತನವನ್ನು ಜಾರಿ ಗೊಳಿಸದೆ ನೌಕರರನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಅಧಿಕಾರಿಗಳು ನಮ್ಮಿಂದ ಕರ್ತವ್ಯವನ್ನು ಮಾತ್ರ ನಿರ್ವಹಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.