
ಕೋಟ: ಮಾಜಿ ಸಚಿವ, ಸಂಸದರಾದ ಜಯಪ್ರಕಾಶ್ ಹೆಗ್ಡೆರವರು ಪಾರಂಪಳ್ಳಿಯ ಪಡುಕೆರೆಯಲ್ಲಿ ಹೊಸದಾಗಿ ಕಟ್ಟಲಾದ ಶ್ರೀ ಶನೀಶ್ವರ ದೇವಸ್ಥಾನಕ್ಕೆ ಬಂದು ನಮಸ್ಕರಿಸಿ ಶ್ರೀ ಶನೇಶ್ವರ ದೇವರ ಆರ್ಶೀವಾದ ಪಡೆದರು. ದೇವಸ್ಥಾನದ ಆಡಳಿತ ಮಂಡಳಿಯು ನೂತನ ದೇವಸ್ಥಾನದ ನಿರ್ಮಾಣ ಹಂತದಲ್ಲಿ ಬಹಳಷ್ಟು ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡು, ದೇವರ ಪ್ರಸಾದ ನೀಡಿ ಶಾಲು ಹೊದಿಸಿ ಫಲ, ಪುಷ್ಪ ಕೊಟ್ಟು ಗೌರವಿಸಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಕಾರ್ಯದರ್ಶಿ ಸತೀಶ್ ಮೆಂಡನ್, ರಾಮ ಬಂಗೇರ, ಜಬ್ಬಾ ಮೆಂಡನ್, ಗಣೇಶ ಮೊಗವೀರ, ರಾಜು ಪೂಜಾರಿ, ನಾಗೇಶ್ ಆನಂದ ರಾಜು, ರತ್ನಾಕರ ಇತರರು ಉಪಸ್ಥಿತರಿದ್ದರು.