
ಮುರುಡೇಶ್ವರ: ಪ್ರಸಿದ್ದ ದೇವಾಲಯವಾದ ಮುರುಡೇಶ್ವರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ದರ್ಶನಕ್ಕೆ ಬರುವಾಗ ವಸ್ತ್ರ ಸಂಹಿತೆ ಪಾಲಿಸುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ದೇವಸ್ಥಾನದ ಮುಂಭಾಗದಲ್ಲಿ ವಸ್ತ್ರ ಸಂಹಿತೆ ಬಗ್ಗೆ ಕಟ್ಟೌಟ್ ಹಾಕಿ ಜಾಗೃತಿ ಮೂಡಿಸಲಾಗಿದೆ.ಇದು ನಮ್ಮ ಸಂಸ್ಕೃತಿಯಾಗಿದೆ.
ಮಹಿಳೆಯರು ಸೀರೆ, ಚೂಡಿದಾರ ಹಾಗೂ ಪುರುಷರು ಅಂಗಿ ದೋತಿ, ಪ್ಯಾಂಟ್ ಶರ್ಟ್ ಮತ್ತು ಕುರ್ತಾ ಪೈಜಾಮ್ ಧರಿಸಿ ದೇವರ ದರ್ಶನ ಪಡೆಯಬಹುದಾಗಿದೆ.