
ಶಿವಮೊಗ್ಗ: ತೀರ್ಥಹಳ್ಳಿಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಕ್ಯಾನ್ಸರ್ ಆಸ್ಪತ್ರೆಯನ್ನು ಹೊಸದಾಗಿ ಪ್ರಾರಂಭಿಸಿದ್ದು, ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿತವಾದ ರಾಜ್ಯದ ಪ್ರಪ್ರಥಮ ಆಸ್ಪತ್ರೆಯಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ|| ಡಿ ಸುರೇಶ್ ರಾವ್ ತಿಳಿಸಿದ್ದಾರೆ. ರೋಗಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಉತ್ತಮ ಚಿಕಿತ್ಸೆ ನೀಡಲು ಪರಿಣಿತ ವೈದ್ಯರ ಗುಂಪಿದ್ದು, ಗುಣಮಟ್ಟದ ಚಿಕಿತ್ಸೆಯನ್ನು ಕೊಡಲು ಬದ್ದವಾಗಿದೆ ಎಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಆರಂಭವಾಗಿದೆ ಹಾಗೂ ಸಂಪೂರ್ಣ ಸುರಕ್ಷಾ, ಖಾಸಗೀ ಇನ್ಸೂರೆನ್ಸ್ ಯೋಜನೆಗಳು ಲಭ್ಯವಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ತಿಳಿಸಿದ್ದಾರೆ. ಕ್ಯಾನ್ಸರ್ ಸರ್ಜರಿ ಕಿಮೋಥರಫಿ, ಸೌಂಡ್ ಸ್ಕ್ಯಾನ್ ಎಕ್ಸರೇ, ಜನರಲ್ ಸರ್ಜರಿ, ರೇಡಿಯೇಷನ್, ಸಿಟಿ ಸ್ಕ್ಯಾನ್, ಇಎನ್ಟಿ, ಅಲ್ಟ್ರಾ ಸೌಲಭ್ಯಗಳು ಆಸ್ಪತ್ರೆಯಲ್ಲಿ ಸಿಗಲಿದೆ, ರೋಗಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಬಿಪಿಲ್ ಕಾರ್ಡ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.