
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಪತಂಜಲಿ ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿಯಿಂದ ನಿನ್ನೆ ಯೋಗ ಜಾಥ ನಡೆಸಲಾಗಿತ್ತು. ನಗರ ಸಭೆ ಅಧ್ಯಕ್ಷೆ ಜೆ ಸಿ ಗೀತಾ ರಾಜ್ಕುಮಾರ್ ಹಾಗೂ ಉಪ ತಹಸಿಲ್ದಾರ್ ಪ್ರಶಾಂತ್ ಜಾಥಕ್ಕೆ ಚಾಲನೆಯನ್ನು ನೀಡಿದರು. ಇದು ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ, ಮುಖ್ಯ ಬಸ್ ನಿಲ್ದಾಣದವರೆ ನಡೆಯಿತು. ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷರಾದ ಅನ್ನಪೂರ್ಣ ಸತೀಶ್, ಜಿಲ್ಲಾ ಸಂರಕ್ಷಕ್ ಡಾ. ವೀಣಾ ಭಟ್, ದೈಹಿಕ ಶಿಕ್ಷಣ ಅಧಿಕಾರಿ ಮುಂಜಿರಾ ಕೌಸರ್, ಶಾರದಾ, ಕೋಕಿಲಾ, ರೂಪ, ಲತಾ, ವಾಣಿಶ್ರೀ ಇತರರು ಹಾಜರಿದ್ದರು.