
ಕೊಡಗು: ಜಿಲ್ಲೆಗಳಲ್ಲಿ 274 ನ್ಯಾಯಬೆಲೆ ಮಳಿಗೆಗಳಿದ್ದು, ಪ್ರತೀ ಅಂಗಡಿಗಳಲ್ಲಿಯೂ ಎಲೆಕ್ಟ್ರಿಕ್ ತೂಕದ ಯಂತ್ರಗಳ ನಿಯಮ ಕಡ್ಡಾಯವಾಗಿದೆ, ಆದರೆ ಇಲ್ಲಿ ಬಹುತೇಕ ನ್ಯಾಯಬೆಲೆ ಮಳಿಗೆಗಳಲ್ಲಿ ಹಳೆಯ ತಕ್ಕಡಿಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ 1 ರಿಂದ 2 ಕೆಜಿ ಅಕ್ಕಿಯ ತೂಕದಲ್ಲಿ ವ್ಯತ್ಯಾಸ ಕಂಡು ಬರುವುದಾಗಿ ಗ್ರಾಹಕರು ಆರೋಪಿಸಿದ್ದಾರೆ. ಅಕ್ಕಿ ವಿತರಣೆಯಲ್ಲಿ ವ್ಯತ್ಯಾಸವಾದ ಅಕ್ಕಿಯನ್ನು ಬಹುತೇಕ ಪಾಲು ಕೇರಳಕ್ಕೆ ಮಾರಾಟವಾಗುತ್ತಿದೆ ಎಂಬ ನೇರ ಆರೋಪವೂ ಇದೆ.
ನ್ಯಾಯಬೆಲೆ ಅಂಗಡಿಗಳ ನಿರ್ವಹಣಾಕಾರರೊಂದಿಗೆ ಆಹಾರ ಇಲಾಖೆಯ ಅಧಕಾರಿಗಳು ಒಳ್ಳೆಯ ಸ್ನೇಹ ಬಾಂದವ್ಯವನ್ನು ಹೊಂದಿರುವುದರಿಂದ ಫಲಾನುಭವಿಗಳಿಗೆ ಮೋಸವನ್ನು ಮಾಡಲು ಸುಲಭವಾಗಿದೆ. ಪಡಿತರ ಫಲಾನುಭವಿಗಳು ಒಂದೊಮ್ಮೆ ತೂಕದ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದರೆ, ತಾಂತ್ರಿಕ ಕಾರಣಗಳನ್ನು ಹಾಗೂ ಪಡಿತರ ಚೀಟಿಯಲ್ಲಿ ಲೋಪವಿದೆ ಎಂದು ಕಾರಣಗಳನ್ನು ನೀಡುತ್ತಾರೆ ಹಾಗೂ ಮುಂದಿನ ತಿಂಗಳಿನಲ್ಲಿ ಅಕ್ಕಿ ಸಿಗದೇ ಇರಬಹುದು ಎಂದು ನ್ಯಾಯ ಬೆಲೆ ಅಂಗಡಿಗಳ ಮೇಲೆ ದೂರು ನೀಡಲು ಭಯಪಡುತ್ತಿದ್ದಾರೆ. ತಾಲ್ಲೂಕು ದಂಡಾಧಿಕಾರಿಯಾದ ಮೋಹನ್ ಕುಮಾರ್, ಎಲೆಕ್ಟ್ರಿಕಲ್ ತೂಕದ ಯಂತ್ರವನ್ನು ಬಳಸದೇ ಇರುವ ನ್ಯಾಯಬೆಲೆ ಮಳಿಗೆಗಳ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.